ಸುಳ್ಯ ಅಂಚೆ ಇಲಾಖೆಯಲ್ಲಿ ಆಧಾರ್ ಸೇವೆ ಪುನರಾರಂಭ
ಸುಳ್ಯದಲ್ಲಿ ಕೆಲ ತಿಂಗಳಿನಿಂದ ಎದುರಾಗಿದ್ದ ಆಧಾರ್ ಸಮಸ್ಯೆಗೆ ಕೊನೆಗೂ ಮುಕ್ತಿ ದೊರೆತಿದ್ದು, ಸುಳ್ಯ ಅಂಚೆ ಇಲಾಖೆಯಲ್ಲಿ ಮಧ್ಯಾಹ್ನ ಬಳಿಕ ಆಧಾರ್ ಸೇವೆ ಆರಂಭವಾಗಿದೆ.
ಸುಳ್ಯದಲ್ಲಿ ಆಧಾರ್ ಸೇವೆ ಸ್ಥಗಿತವಾಗಿದ್ದರಿಂದ ಜನರು ಬೆಳ್ಳಾರೆ, ಪುತ್ತೂರು ತಾಲೂಕಿಗೆ ಹೋಗಿ ಆಧಾರ್ ತಿದ್ದುಪಡಿ ಸಹಿತ ಇನ್ನಿತರ ಕೆಲಸಮಾಡಿಕೊಂಡು ಬರಬೇಕಾಗಿದ್ದು. ತಾಲೂಕು ಪಂಚಾಯತ್, ನಗರ ಪಂಚಾಯತ್ ಸಭೆಯಲ್ಲಿ ಚರ್ಚೆಗಳಾಗಿದ್ದವು.















ಸುಳ್ಯಕ್ಕೆ ಉಸ್ತುವಾರಿ ಸಚಿವರು ಬಂದಾಗ ಗಮನ ಸೆಳೆಯಲಾಗಿತ್ತು. ಶಾಸಕರು ಕೂಡಾ ಆಧಾರ್ ಕೇಂದ್ರ ಪುನರಾರಂಭಕ್ಕೆ ಸರಕಾರದ ಮಟ್ಟದಲ್ಲಿ ಪ್ರಯತ್ನ ಪಟ್ಟಿದ್ದರು.
ನ.ಪಂ. ಸದಸ್ಯ ರಿಯಾಜ್ ಕಟ್ಟೆಕಾರ್ ರವರು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿ, ಅವರ ಮೂಲಕ ಸರಕಾರದ ಕಾರ್ಯದರ್ಶಿ ಯವರಿಗೆ ಮನವಿ ಸಲ್ಲಿಸಿದ್ದರು. ಅಲ್ಲಿಂದ ರಿಯಾಜ್ ರವರಿಗೆ ಸುಳ್ಯ ಅಂಚೆ ಇಲಾಖೆಯಲ್ಲಿ ಆಧಾರ್ ಸೇವೆ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸೂಚನೆ ಬಂದಿತ್ತು.
ಇದೀಗ ಎಲ್ಲದರ ಪರಿಣಾಮವಾಗಿ ಸುಳ್ಯ ಅಂಚೆ ಕಚೇರಿಯಲ್ಲಿ ಮಧ್ಯಾಹ್ನದ ಬಳಿಕ ಆಧಾರ್ ಸೇವೆ ಲಭ್ಯವಿದೆ.
ಮುಂದಿನ ತಿಂಗಳಿಂದ ಪ್ರತೀ ದಿನ ಬೆಳಗ್ಗಿನಿಂದಲೇ ಆಧಾರ್ ಸೇವೆ ಸುಳ್ಯದಲ್ಲಿ ಸಿಗಲಿದೆ ಎಂದು ತಿಳಿದುಬಂದಿದೆ.










