ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಶ್ರೀ ಬಸವೇಶ್ವರ ದೇವಾಲಯ, ಕುಲ್ಕುಂದ ಇಲ್ಲಿನ 14 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಇಂದು ನಡೆಯಲಿದ್ದು
ಶ್ರೀ ಬಸವೇಶ್ವರ ದೇವಸ್ಥಾನ ಕುಲ್ಕುಂದ ಬಸವನಮೂಲೆ ಇಲ್ಲಿ ಕಗಣಪತಿಯ ಪ್ರತಿಷ್ಠಾಪನೆ ನಡೆಯಿತು.
ಮಹಾಗಣಪತಿ ಹೋಮ, ಬಳಿಕ ಬಸವೇಶ್ವರ ಭಜನಾ ಮಂಡಳಿ, ಶ್ರೀ ಶಾರದಾಂಬ ಮಹಿಳಾ ಭಜನಾ ಮಂಡಳಿ ಕೈಕಂಬ ಇವರಿಂದ ಭಜನೆ ನಡೆಯಲಿದೆ.
















ಮಧ್ಯಾಹ್ನ ಮಹಾಪೂಜೆ, ಬಳಿಕ ಪರಿವಾರ ಸಹಿತ ಶ್ರೀ ಬಸವೇಶ್ವರ ದೇವರಿಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆದು ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಅಪರಾಹ್ನ : ಸಭಾ ಕಾರ್ಯಕ್ರಮ ನಡೆಯಲಿದ್ದು ಸಂಪೂರ್ಣ ಸಹಜ ಕೃಷಿ ಯೂಟ್ಯೂಬ್ ಚಾನೆಲ್ ಉಜಿರೆ ಇದರ ಮುಖ್ಯಸ್ಥ ಶಿವಪ್ರಸಾದ್ ಮಲೆಬೆಟ್ಟು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಗಣೇಶೋತ್ಸವ ಟ್ರಸ್ಟ್ ನ ಅಧ್ಯಕ್ಷ ಜಯನ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸಮಾರಂಭದಲ್ಲಿ ಆ.17 ರಂದು ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಸಂಜೆ ಗಂಟೆ 4.00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಶ್ರೀ ಮಹಾಗಣಪತಿ ದೇವರ ಶೋಭಾಯಾತ್ರೆ ಜಲ ಸ್ತಂಭನ ನಡೆಯಲಿದೆ.










