ರಾಷ್ಟ್ರೀಯ ಕಾಫಿ ಮಂಡಳಿ ಅಧ್ಯಕ್ಷರಾದ ದಿನೇಶ್ ಎಂ ಜಿ ಅವರು ಆ.25ರಂದು ಸುಳ್ಯ ರೈತ ಉತ್ಪಾದಕ ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯು ಕಾಫಿ ಗಿಡ ನರ್ಸರಿ ಆರಂಭಿಸಿ 50,000 ಗಿಡಗಳನ್ನು ಬೆಳೆಸಿ ಅತ್ಯಂತ ಕಡಿಮೆ ಬೆಲೆಯಲ್ಲಿ ರೈತರಿಗೆ ನೀಡಿರುವ ಬಗ್ಗೆ ಮತ್ತು ಸಂಸ್ಥೆಯು ಈಗಾಗಲೇ ನಾಲ್ಕು ಕಡೆಗಳಲ್ಲಿ ಕಾಫಿ ಬೆಳೆ ಬಗ್ಗೆ ತರಬೇತಿ ಹಮ್ಮಿಕೊಂಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.















ಈ ಸಂದರ್ಭದಲ್ಲಿ ಸೆವೆನ್ ಬಿನ್ ಸಂಸ್ಥೆಯ ಚೇರ್ಮನ್ ಡಾ. ಧರ್ಮರಾಜ್ ಅಧ್ಯಕ್ಷರಾದ ಡಾಕ್ಟರ್ ಪ್ರದೀಪ್ ಹಾಗೂ ಸದಸ್ಯರುಗಳು ಕೊಡಗು ಕಾಫಿ ಬೋರ್ಡಿನ ನಿರ್ದೇಶಕರು, ಕಾಫಿ ಮಂಡಳಿಯ ಉಪ ನಿರ್ದೇಶಕರಾದ ಚಂದ್ರಶೇಖರ್, ಮತ್ತು ಜೈನ್ ಸಂಸ್ಥೆಯ ಅಧಿಕಾರಿಗಳು ಆಗಮಿಸಿದ್ದರು. ಈ ಸಂದರ್ಭದಲ್ಲಿ ರೈತೋತ್ಪಾದಕ ಸಂಸ್ಥೆಯಿಂದ ಅಧ್ಯಕ್ಷರು ಗಣ್ಯರನ್ನು ಸಾಲು ಹೊದಿಸಿ ಗೌರವಿಸಿದರು.
ಸಂಸ್ಥೆಯ ನಿರ್ದೇಶಕರುಗಳಾದ ನಿರ್ದೇಶಕರುಗಳಾದ ಜಯ ರಾಮ ಮುಂಡೋಲಿ ಮೂಳೆ,ರಾಮಕೃಷ್ಣ ಬೆ ಳ್ಳಾರೆ,ಮಧುರಾ ಮಂಡೆಕೋಲು ಶಶಿಧರ್ ನಾಯರ್ ಉಬರಡ್ಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೀಶ ಕೆ ಸದಸ್ಯರುಗಳಾದ ಶ್ಯಾಮ್ ಪ್ರಸಾದ್ ಸತ್ಯನಾರಾಯಣ ಎಂ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.










