ಜಾಲ್ಸೂರು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ 38 ನೇ ವರುಷದ ಶ್ರೀ ಗಣೇಶೋತ್ಸವ ಆರಂಭ

0

ಸಂಜೆ ಗಣಪತಿಯ ವೈಭವದ ಶೋಭಾಯಾತ್ರೆ – ವಿಶ್ವನಾಥ ಬಳವಂತಡ್ಕ ಅಡೂರ್ ಮತ್ತು ಶಿಷ್ಯವೃಂದದವರಿಂದ ಕುಣಿತ ಭಜನೆ

ಜಾಲ್ಸೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ 38 ನೇ ವರುಷದ ಶ್ರೀ ಗಣೇಶೋತ್ಸವ ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಸ್ವಾಮಿ ಸಭಾಂಗಣದಲ್ಲಿ ಆರಂಭಗೊಂಡಿದೆ.

ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ನಡೆದು, 37 ನೇ ವರ್ಷದ ಗಣೇಶೋತ್ಸವ ವಿಗ್ರಹದಾನಿಗಳಾದ ಶ್ರೀಮತಿ ಯಶೋದ ಮಹಾಲಿಂಗನ್ ಧ್ವಜಾರೋಹಣ ಮಾಡಿದರು.
ಬಳಿಕ 12 ತೆಂಗಿನಕಾಯಿ ಗಣಪತಿ ಹವನ ನಡೆದು ಗಣೇಶನ ಪ್ರತಿಷ್ಠೆ ನಡೆಯಿತು. ಮಹಾಪೂಜೆ, ಪ್ರಸಾದ ವಿತರಣೆ, ಕ್ಷೇತ್ರ ಪಾಲಕ ನಾಗದೇವರಿಗೆ ನಾಗ ತಂಬಿಲ ನಡೆಯಿತು.

ಗಣೇಶ ವಿಗ್ರಹ ದಾನಿ ಎ.ಕೆ. ಬಾಲಗೋಪಾಲ ಎರ್ಮೆಕ್ಕಾರು, ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಜಗದೀಶ್ ಬೇರ್ಪಡ್ಕ, ಅಧ್ಯಕ್ಷ ನಿಶಾಂತ್ ಮೋoಟಡ್ಕ, ಕಾರ್ಯದರ್ಶಿ ಧರ್ಮಪಾಲ ಕೆಮನಬಳ್ಳಿ, ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರು, ಭಜನಾ ಮಂದಿರದ ಅಧ್ಯಕ್ಷ ಜಯರಾಮ ರೈ ಜಾಲ್ಸೂರು, ಹಾಗೂ ಪದಾಧಿಕಾರಿಗಳು, ಊರಿನವರು ಉಪಸ್ಥಿತರಿದ್ದರು.

ಮಹಿಳೆಯರಿಗೆ ಹೂ ಕಟ್ಟುವ ಸ್ಪರ್ಧೆ, ಹಣತೆ ಉರಿಸುವ ಸ್ಪರ್ಧೆ ನಡೆಯಿತು. ಸ್ಥಳೀಯ ಭಜಕರಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ ಮಹಾಪೂಜೆ ಬಳಿಕ ಶೋಭಾಯಾತ್ರೆ ನಡೆಯುವುದು. ಜಾಲ್ಸೂರು, ಅಡ್ಕಾರು, ವಿನೋಬಾನಗರ, ಕೋನಡ್ಕಪದವು ರಸ್ತೆಯಾಗಿ ಸಾಗಿ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಳಿ ಪಯಸ್ವಿನಿ ನದಿ ಕಿನಾರೆಯಲ್ಲಿ ಜಲಸ್ತಂಭನ ನಡೆಯುವುದು.
ಶೋಭಾಯಾತ್ರೆಯಲ್ಲಿ ವಿಶ್ವನಾಥ ಬಳವಂತಡ್ಕ ಅಡೂರ್ ಇವರ ಶಿಷ್ಯವೃಂದದವರಿಂದ ಕುಣಿತ ಭಜನೆ ನಡೆಯಲಿದೆ.