ಕೋಟೆಮುಂಡುಗಾರಿನಲ್ಲಿ ಗಣೇಶೋತ್ಸವ ಪ್ರಯುಕ್ತ ಮೂರ್ತಿ ಪ್ರತಿಷ್ಠೆ

0

ಇಂದು ಸಂಜೆ ಕುಸಲ್ದ ಎಸಲ್ ಕಾಮಿಡಿ ಶೋ ಕಾರ್ಯಕ್ರಮ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಟೆಮುಂಡುಗಾರು ಇದರ ವತಿಯಿಂದ 34ನೇ ವರ್ಷದ ಶ್ರೀ ಗಣೇಶೋತ್ಸವದ ಪ್ರಯುಕ್ತ ಇಂದು ಕಳಂಜ ಯುವಕ ಮಂಡಲದಲ್ಕಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆಯಿತು..
ಭಜನೆ, ಬಳಿಕ ಗಣಪತಿ ಹವನ, ಅಕ್ಷರಾಭ್ಯಾಸ ನಡೆದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಬಹುಮಾನ ವಿತರಣೆ, ಭೋಜನ ವಿತರಣೆ ನಡೆಯಲಿದೆ, ಸಂಜೆ ಗಂಟೆ 3 ರಿಂದ ತುಳು ಅಪ್ಪೆ ಕಲಾವಿದರು ಕುಡ್ಲ ಇವರಿಂದ “ಕುಸಲ್ದ ಎಸಲ್ ಕಾಮಿಡಿ ಶೋ” ನಡೆಯಲಿದೆ. ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಶೋಭಾಯಾತ್ರೆ ನಡೆದು ಅಯ್ಯನ ಕಟ್ಟೆ ಹೊಳೆಯಲ್ಲಿ ಮೂರ್ತಿ ಜಲಸ್ತಂಭನ ನಡೆಯಲಿದೆ.