ಮುಂಗಾರು ವಾಲಿಬಾಲ್ ಅಕಾಡೆಮಿ ಸುಳ್ಯ, ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಗಳು ಸುಳ್ಯ ಮತ್ತು ತಾಲೂಕು ವಾಲಿಬಾಲ್ ಅಸೋಶಿಯೇಶನ್ ಇವರ ಆಶ್ರಯದಲ್ಲಿ ನಡೆದ ವಾಲಿಬಾಲ್ ಚಾಂಪಿಯನ್ ಶಿಪ್ ನಲ್ಲಿ ನಿಂತಿಕಲ್ಲಿನ ಕೆ.ಎಸ್ ಗೌಡ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಆ. 24ರಂದು ಸುಳ್ಯದ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೆ.ಎಸ್ ಗೌಡ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ಅತ್ಯುತ್ತಮವಾಗಿ ಆಡಿ ವಿಜಯಿಯಾಗಿ ಪ್ರಶಸ್ತಿ ಪಡೆಯಿತು.















ತಂಡದ ನಾಯಕ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ ತೇಜಸ್ ಕೆ.ಎಲ್ ಬೆಸ್ಟ್ ಸ್ಟ್ರೆಕರ್ ಪ್ರಶಸ್ತಿ ಪಡೆದರು. ತೀರ್ಥೇಶ್ ದ್ವಿತೀಯ ಪಿಯುಸಿ, ಮೋಕ್ಷಿತ್ ದ್ವಿತೀಯ ಪಿಯುಸಿ, ಸುಮಂತ್ ದ್ವಿತೀಯ ಪಿಯುಸಿ, ಜೀವನ್ ದ್ವಿತೀಯ ಪಿಯುಸಿ, ಪ್ರಣಿತ್ ಡಿ’ಸೋಜ , ಪ್ರಥಮ ಪಿಯುಸಿ, ಅಕ್ಷಯ್ ದ್ವಿತೀಯ ಪಿಯುಸಿ, ಪ್ರಜ್ವಲ್ ದ್ವಿತೀಯ ಪಿಯುಸಿ, ಜೀವನ್ ಪ್ರಥಮ ಪಿಯುಸಿ, ಜೀವಿತ್ ಪ್ರಥಮ ಪಿಯುಸಿ, ಪ್ರೀತಂ ಪ್ರಥಮ ಪಿಯುಸಿ ತಂಡದಲ್ಲಿದ್ದರು.
ತಂಡಕ್ಕೆ ಪ್ರಾಚಾರ್ಯರಾದ ಸದಾನಂದ ರೈ ಕೂವೆಂಜ ತರಬೇತಿ ನೀಡಿದ್ದರು. ವಿಜೇತ ತಂಡವನ್ನು ಸಂಸ್ಥೆಯ ಅಧ್ಯಕ್ಷರಾದ ಅಶೋಕ್ ಕುಮಾರ್ ಕೆ.ಎಸ್ ಅಭಿನಂದಿಸಿದರು.










