ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ: ಸಾಂಸ್ಕೃತಿಕ-ಕೀಡಾ ಸ್ಪರ್ಧೆ ಉದ್ಘಾಟನೆ

0

ಧಾರ್ಮಿಕ ಆಚರಣೆ ,ನಂಬಿಕೆಯನ್ನು ಉತ್ಸವಗಳು ಬಲ ಪಡಿಸುತ್ತದೆ:ಶ್ರೀಮತಿ ಸಂಧ್ಯಾ

ಸಾರ್ವಜನಿಕ ಆರಾಧನಾ ಸಮಿತಿ ಪಂಜ, ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ-2025 ಇದರ ವತಿಯಿಂದ ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆ.27 ರಿಂದ ಆ.29 ತನಕ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ವಠಾರದಲ್ಲಿ ವಿಜೃಂಭಣೆಯಿಂದ ಜರುಗಲಿದೆ.

ಆ 27 ರಂದು ಸಾಂಸ್ಕೃತಿಕ ಮತ್ತು ಕೀಡಾ ಸ್ಪರ್ಧೆ ಉದ್ಘಾಟನೆ ಗೊಂಡಿತು. ಕ್ರೀಡಾ ಸ್ಪರ್ಧೆಯನ್ನು ವಲಯ ಅರಣ್ಯಾಧಿಕಾರಿ ಶ್ರೀಮತಿ ಸಂಧ್ಯಾ ಉದ್ಘಾಟಿಸಿ ಮಾತನಾಡಿ. “ಧಾರ್ಮಿಕ ಆಚರಣೆಗಳ ಉತ್ಸವಗಳಿಂದ ಸಮುದಾಯಗಳ ಒಗ್ಗೂಡಿಸುತ್ತದೆ ಹಾಗೂ ನಮ್ಮ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ನಡೆಯುತ್ತದೆ. ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೆ ದೈಹಿಕ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ.ಎಂದು ಅವರು ಹೇಳಿದರು. ಹೇಳಿದರು. ಸಾಂಸ್ಕೃತಿಕ ಸ್ಪರ್ಧೆಯನ್ನು ಕೇನ್ಯ ಶಾರದಾ ಗಾರ್ಡನ್ ಶ್ರೀಮತಿ ಮಮತಾ ಎಸ್ ಶೆಟ್ಟಿ ಉದ್ಘಾಟಿಸ ಶುಭ ಹಾರೈಸಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಗುರು ಪ್ರಸಾದ್ ತೋಟ ಸಭಾಧ್ಯಕ್ಷತೆ ವಹಿಸಿದ್ದರು.
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್,
ಆರಾಧನಾ ಸಮಿತಿ ಗೌರವಾಧ್ಯಕ್ಷ ಮಾಧವ ಗೌಡ ಜಾಕೆ, ಅಧ್ಯಕ್ಷ ಸವಿತಾರ ಮುಡೂರು, ಕಾರ್ಯದರ್ಶಿ ಜಯರಾಮ ಕಲ್ಲಾಜೆ, ಗಣೆಶೋತ್ಸವ ಸಮಿತಿ ಕಾರ್ಯದರ್ಶಿ ಜೀವನ್ ಶೆಟ್ಟಿಗದ್ದೆ, ಸಾಂಸ್ಕೃತಿಕ ಸ್ಪರ್ಧೆಗಳ ಸಂಚಾಲಕ ಸತೀಶ್ ಪಂಜ, ಕ್ರೀಡಾ ಸ್ಪರ್ಧೆಗಳ ಸಂಚಾಲಕ ಹಿತೇಶ್ ಪಂಜದಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯಶ್ಮಿತಾ ಚೀಮುಳ್ಳು ಪ್ರಾರ್ಥಿಸಿದರು.ವಾಸುದೇವ ಮೇಲ್ಪಾಡಿ ಸ್ವಾಗತಿಸಿದರು. ಸೋಮಶೇಖರ ನೇರಳ ನಿರೂಪಿಸಿದರು.ತೀರ್ಥಾನಂದ ಕೊಡೆಂಕಿರಿ ವಂದಿಸಿದರು.


ಅ. ಗಂ.2.30 ರಿಂದ ಸೂರ್ಯ – ಹೊನಲು ಬೆಳಕಿನ ಪುರುಷರ 65 ಕೆ.ಜಿ ವಿಭಾಗದ ಕಬಡ್ಡಿ ಪಂದ್ಯಾಟ ನಡೆಯಲಿದೆ..
ವೈಧಿಕ ಕಾರ್ಯಕ್ರಮದಲ್ಲಿ ಮುಂಜಾನೆ ಪ್ರತಿಷ್ಠೆ, ಗಣಪತಿ ಹೋಮ, ಶ್ರೀ ಮಹಾಗಣಪತಿ ಗೆ ಬೆಳ್ಳಿ ಪಾಶಾಂಕುಶ ಸಮರ್ಪಣೆ, ಭಜನಾ ಸಂಕೀರ್ತನೆ ನಡೆಯಿತು.ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ.ರಾತ್ರಿ ಮಹಾ ಪೂಜೆ, ಪ್ರಸಾದ ವಿತರಣೆ ಜರುಗಲಿದೆ.ಸಂಜೆ ಭಜನಾ ಸಂಕೀರ್ತನೆ, ರಾತ್ರಿ ಮಹಾ ಪೂಜೆ ಪ್ರಸಾದ ವಿತರಣೆ ನಡೆಯಲಿದೆ.


ಆ.28: ಕಾರ್ಯಕ್ರಮಗಳು: ಉತ್ಸವ ಕಾರ್ಯಕ್ರಮ ಬೆಳಗ್ಗಿನ ಪೂಜೆ ಪ್ರಸಾದ ವಿತರಣೆ, ಭಜನಾ ಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ. ಅಪರಾಹ್ನ ಭಜನಾ ಸಂಕೀರ್ತನೆ, ಸಂಜೆ ಕುಣಿತ ಭಜನೆ, ರಾತ್ರಿ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ,
ಅ. ಗಂಟೆ 2 ರಿಂದ ಭಜನಾ ಸಂಕೀರ್ತನೆ.ರಾತ್ರಿ ಮಹಾ ಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.

ರಾತ್ರಿ ಗಂ7.30 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಗಣೇಶೋತ್ಸವ ಸಮಿತಿ ಅಧ್ಯಕ್ಷ ಗುರುಪ್ರಸಾದ್ ತೋಟ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಬೆಂಗಳೂರು, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ ವಿ ಪಾಲ್ಗೊಳ್ಳಲಿದ್ದಾರೆ. ಸುಳ್ಯ , ಸಂಸ್ಕೃತಿ ಚಿಂತಕ ಉದಯಭಾಸ್ಕರ್ ಉಪನ್ಯಾಸ ನೀಡಲಿದ್ದಾರೆ. ಸಾರ್ವಜನಿಕ ಆರಾಧನಾ ಸಮಿತಿಯ ಅಧ್ಯಕ್ಷ ಸವಿತಾರ ಮುಡೂರು ಉಪಸ್ಥಿತರಿರುವರು.‌
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂ.ಗಂ.6 ರಿಂದ 7ತನಕ ಕು.ಸುಮಾ ಕೋಟೆ ರವರಿಂದ ಗಾನ ಸುಧೆ, ರಾತ್ರಿ .ಗಂ 8 ರಿಂದ ಗುರುದೇವ್ ಅಕಾಡಮಿ ಆಫ್ ಫೈನ್ ಆರ್ಟ್ಸ್ ಮಂಡ್ಯ ಮತ್ತು ಮೈಸೂರು ಕಲಾವಿದರಿಂದ ನೃತ್ಯ ವೈವಿಧ್ಯ ಪ್ರದರ್ಶನಗೊಳ್ಳಲಿದೆ.

ಆ.29 : ಶೋಭಾಯಾತ್ರೆ: ಆ.29 ರಂದು ಬೆಳಗಿನ ಪೂಜೆ, ಭಜನಾ ಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಜರುಗಲಿದೆ.
ಸಂ.ಗಂ. 3ರಿಂದ ವೈಭವದ ಶೋಭಾಯಾತ್ರೆಯು ದೇಗುಲದ ವಠಾರದಿಂದ ಪಂಜ ಪೇಟೆಯ ಮೂಲಕ ಮುಖ್ಯರಸ್ತೆಯಲ್ಲಿ ಸಾಗಿ ಪಂಜ ಹೊಳೆಯ ಸೇತುವೆ ಬಳಿ ಜಲಸ್ತಂಭನ ಜರುಗಲಿದೆ. ಶೋಭಾಯಾತ್ರೆಯಲ್ಲಿ ತುಳುನಾಡಿನ ಹೆಮ್ಮೆಯ ಹುಲಿ ವೇಷ, ಕೀಲು ಕುದುರೆ ,ಕುಣಿತ ಭಜನೆ, ನಾಸಿಕ್ ಬ್ಯಾಂಡ್ ಮೊದಲಾದ ತಂಡಗಳು ಪಾಲ್ಗೊಳ್ಳಲಿವೆ.