ಅಡ್ಕಾರು : ಶಾರದಾ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಕಾರ್ತಿಕೇಯ ಯುವ ಸೇವಾ ಸಮಿತಿಯ ವತಿಯಿಂದ ನಡೆಯುವ 7 ನೇ ವರುಷದ ಶಾರದಾ ಉತ್ಸವದ ಆಮಂತ್ರಣ ಪತ್ರಿಕೆ ಆ. 27 ರಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.

ಅರ್ಚಕ ಶ್ರೀವರ ಪಾಂಗಣ್ಣಯರವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಗುರುರಾಜ್ ಭಟ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರಿಪ್ರಕಾಶ್ ಆಡ್ಕಾರ್, ಪ್ರಮುಖರಾದ ನ. ಸೀತಾರಾಮ್, ಸುಧಾಕರ ಕಾಮತ್, ಗೋಪಾಲ ಆಡ್ಕಾರ್, ಶರತ್ ಆಡ್ಕಾರ್, ಡಾ. ಗೋಪಾಲಕೃಷ್ಣ ಭಟ್, ಕಾರ್ತಿಕೇಯ ಸಮಿತಿಯ ಗೌರವ ಅಧ್ಯಕ್ಷ ಯತಿಂದ್ರ ಆಡ್ಕಾರ್,
ಅಧ್ಯಕ್ಷ ಸುಬ್ರಹ್ಮಣ್ಯ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಆಡ್ಕಾರ್, ರಾಜೇಶ್ ಆಡ್ಕಾರ್ ಬೈಲ್, ದಾಮೋದರ ಆಡ್ಕಾರ್ ಬೈಲ್ ಹಾಗೂ ಸರ್ವ ಸದಸ್ಯರು ಮತ್ತು ಊರಿನ ಪ್ರಮುಖರು ಉಪಸ್ಥಿತರಿದ್ದರು.