ಕೊಯನಾಡು ಮಹಾಗಣಪತಿ ಗುಡಿಯಲ್ಲಿ ಗಣೇಶ ಚತುರ್ಥಿ ಹಬ್ಬವು ವಿಜೃಂಭಣೆಯಿಂದ ಆ .27 ರಂದು ನಡೆಯಿತು.
















ಬೆಳಿಗ್ಗೆ ಸಾಮೂಹಿಕ ಗಣಪತಿ ಹೋಮ, ಧಾನ್ಯಲಕ್ಷ್ಮಿ ಪೂಜೆ, ಕದಿರು ಕಟ್ಟುವುದು, ಕದಿರು ಪ್ರಸಾದ ವಿತರಣೆ, ಮಹಾಪೂಜೆ ನಂತರ ಪ್ರಸಾದ ವಿತರಣೆ, ಮಕ್ಕಳಿಗೆ ಅನ್ನ ಪ್ರಾಸನ, ಸಾರ್ವಜನಿಕ ನವಾನ್ನ ಸಂತರ್ಪಣಾ ಕಾರ್ಯಕ್ರಮವು ನಡೆಯಿತು. ಊರ ಪರವೂರಿನಿಂದ ಕದಿರು ಪ್ರಸಾದಕ್ಕೆ ಹೆಚ್ಚಿನ ಭಕ್ತಾಭಿಮಾನಿಗಳು ದೇವಾಲಯಕ್ಕೆ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ದೇವಸ್ಥಾನದ ಪದಾಧಿಕಾರಿಗಳು , ಆಡಳಿತ ಮಂಡಳಿ , ಸರ್ವಸದಸ್ಯರು, ಊರಿನವರು ಉಪಸ್ಥಿತರಿದ್ದರು.










