ಮರ್ಕಂಜ: ಸುಳ್ಯ ಹಬ್ಬ ಸಮಿತಿ ವತಿಯಿಂದ ಗ್ರಾಮದ ದಾಖಲೀಕರಣಕ್ಕೆ ರೆಂಜಾಳದಲ್ಲಿ ಚಾಲನೆ

0

ಸುಳ್ಯ ಹಬ್ಬ ಸಮಿತಿ ಮರ್ಕಂಜ ಇದರ ವತಿಯಿಂದ ಮರ್ಕಂಜ ಗ್ರಾಮದ ದಾಖಲೀಕರಣಕ್ಕೆ ಇಂದು ರೆಂಜಾಳದಲ್ಲಿ ಚಾಲನೆ ನೀಡಲಾಯಿತು.

ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸುಳ್ಯ ಹಬ್ಬ ಗ್ರಾಮ ಸಮಿತಿ ಮರ್ಕಂಜದ ಅಧ್ಯಕ್ಷ ರಾಘವ ಗೌಡ ಕಂಜಿಪಿಲಿ, ಅರಂತೋಡು ಗ್ರಾಮ ಸಮಿತಿ ಅಧ್ಯಕ್ಷ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಸಾಹಿತಿ ಹಾಗೂ ಯಕ್ಷಗಾನ ಕಲಾವಿದ ಜಗನ್ಮೋಹನ ರೈ ರೆಂಜಾಳ ಶುಭ ಹಾರೈಸಿದರು.

ಅನ್ನಪೂರ್ಣ ಸಮಿತಿ ಅಧ್ಯಕ್ಷ ಚಿನ್ನಪ್ಪ ಬೇರಿಕೆ, ಸೇವಾ ಸಮಿತಿ ಅಧ್ಯಕ್ಷ ಪುಟ್ಟಣ್ಣ ಗೌಡ ಬಾನುರು, ಮರ್ಕಂಜ ಪ್ರಾ. ಕೃ. ಪ. ಸ. ಸಂಘದ ನಿರ್ದೇಶಕ ಮೋನಪ್ಪ ಪೂಜಾರಿ ಹೈದಂಗೂರು, ಶಾಸ್ತ್ರವು ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಬೇರಿಕೆ, ಶಿವ ಪಂಚಾಕ್ಷರಿ ಭಜನಾ ಮಂಡಳಿ ಅಧ್ಯಕ್ಷ ಲೋಹಿತ್ ರೆಂಜಾಳ, ಚಾಮುಂಡೇಶ್ವರಿ ಭಜನಾ ಮಂಡಳಿ ಕೊರತ್ತೋಡಿ ಇದರ ಅಧ್ಯಕ್ಷ ಜಯಂತ ಚಾಕೋಟೆಮೂಲೆ, ಹಿರಿಯ ಕ್ರೀಡಾಪಟು ನಾರಾಯಣ ಅಜ್ಜಿಕಲ್ಲು ಹಾಗೂ ಪ್ರಮುಖರಾದ ಶಶಿಕಾಂತ ಗುಳಿಗಮೂಲೆ, ಕೇಶವ ಜೋಗಿಮೂಲೆ, ಬಾಲಕೃಷ್ಣ ಜೋಗಿಮೂಲೆ, ಮನೋಹರ ರೈ ಹೈದಂಗೂರು, ನಾರಾಯಣ ಹೈದಂಗೂರು, ಐತ ರೆಂಜಾಳ, ಅಚ್ಚುತ ಮುಂಡೋಕಜೆ, ಗಂಗಾಧರ ಕೊರತೋಡಿ ಉಪಸ್ಥಿತರಿದ್ದರು.

ವರದಿಗಾರ ದಯಾನಂದ ಕೊರತೋಡಿ ಸ್ವಾಗತಿಸಿ, ಪ್ರತಿನಿಧಿ ದಾಮೋದರ ಪಾಟಾಳಿ ವಂದಿಸಿದರು.