ಕೆವಿಜಿ ಕ್ಯಾಂಪಸ್ ಗಣೇಶೋತ್ಸವ ಸಮಿತಿ ಕುರುಂಜಿಭಾಗ್ ಸುಳ್ಯ ವತಿಯಿಂದ ಅದ್ದೂರಿ ಗಣೇಶೋತ್ಸವ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆ. 27 ನಡೆಯಿತು. ಬೆಳಿಗ್ಗೆ ಮೆರವಣಿಗೆಯೊಂದಿಗೆ ಗಣಪತಿ ಪ್ರತಿಷ್ಠೆ ಬಳಿಕ ಭಜನೆ ನಡೆಯಿತು.















ಈ ಸಂದರ್ಭದಲ್ಲಿ ಎಒಎಲ್ಇ ಅಧ್ಯಕ್ಷ ಡಾ. ಕೆವಿ ಚಿದಾನಂದ, ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ, ಪ್ರಧಾನ ಕಾರ್ಯದರ್ಶಿ ಅರ್ಕಿಟೆಕ್ಟ್ ಅಕ್ಷಯ್ ಕೆ.ಸಿ, ಕಾಲೇಜಿನ ಡೀನ್ ನೀಲಾಂಬಿಕೈ ನಟರಾಜನ್, ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಸಿ.ಆರ್. ಭಟ್, ಡಾ. ಗೀತಾ ದೊಪ್ಪಾ, ಡಾ. ಸುಬ್ರಹ್ಮಣ್ಯ, ಕೆವಿಜಿ ಸುಳ್ಯ ಹಬ್ಬ ಸಮಿತಿ ಸ್ಥಾಪಕಾಧ್ಯಕ್ಷರು ಡಾ. ಎನ್.ಎ ಜ್ಞಾನೇಶ್ ಸೇರಿದಂತೆ ವಿವಿಧ ಸಂಸ್ಥೆಗಳ ಪ್ರಾಂಶುಪಾಲರು, ವಿಭಾಗ ಮುಖ್ಯಸ್ಥರು ಬೋಧಕ ಭೋದಕೇತರ ಸಿಬ್ಬಂದಿಗಳು, ವಿದ್ಯಾರ್ಥಿ- ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಧಾರ್ಮಿಕ ಕಾರ್ಯಕ್ರಮದ ಬಳಿಕ ಸಂಜೆ ಶೋಭಾಯಾತ್ರೆ ನಡೆದು ಎನ್.ಎಮ್.ಸಿ ಕ್ರೀಡಾಂಗಣದಲ್ಲಿ ಗಣಪತಿ ವಿಸರ್ಜನೆ ನಡೆಯಲಿದೆ.










