ಭಜನಾ ಕಾರ್ಯಕ್ರಮ, ದೇವರಿಗೆ ಮಹಾಪೂಜೆ, ಸಾಧಕರಿಗೆ ಸನ್ಮಾನ, ಶೋಭಯಾತ್ರೆ
ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಗೊಳಿಯಡ್ಕ – ಮರ್ಕಂಜ ಇದರ ವತಿಯಿಂದ ಆಯೋಜನೆ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೊಳಿಯಡ್ಕ, ಮರ್ಕಂಜ ಇದರ ವತಿಯಿಂದ 9ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ ನಡೆಯಿತು.
ಬೆಳಿಗ್ಗೆ ಗಣಪತಿ ವಿಗ್ರಹದ ಆಗಮನ ಬಳಿಕ ಗಣಪತಿ ಹವನ, ವಿಗ್ರಹ ಪ್ರತಿಷ್ಠಾಪನೆ, ಬೆಳಿಗ್ಗಿನ ಪೂಜೆ, ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನದ ಬಳಿಕ ವಿಜೃಂಭಣೆಯ ಶೋಭಯಾತ್ರೆ ನಡೆಯಿತು.’
















ಮಹಾಪೂಜೆಯ ಬಳಿಕ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಊರಿನ ವಿದ್ಯಾರ್ಥಿಗಳನ್ನು ಮತ್ತು ಇತ್ತೀಚಿಗೆ ಗಡಿರಕ್ಷಣ ಸೇನೆ ಗೆ ಆಯ್ಕೆ ಗೊಂಡ ಅರಂತೋಡು ಗ್ರಾಮದ ಅಡ್ತಲೆ ಸುಶ್ಮಿತಾ ರವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಗಣೇಶೋತ್ಸವ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡು ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.











