















ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಆ. ೨೭ ರಂದು ರಾತ್ರಿ ಹಳೆಗೇಟಿನ ವಸಂತ ಕಟ್ಟೆಯ ಹಿಂಭಾಗದ ತಡೆಗೋಡೆ ಕುಸಿತ ಉಂಟಾಗಿ ನಷ್ಟ ಸಂಭವಿಸಿದೆ.
ರಾತ್ರಿ ವೇಳೆ ಘಟನೆ ಸಂಭವಿಸಿದ್ದು, ಈ ಭಾಗದಲ್ಲಿ ನಿರ್ಮಿಸಿದ್ದ ತಡೆಗೋಡೆ ಅಡಿ ಭಾಗದಿಂದಲೇ ಕುಸಿದು ಬಿದ್ದಿದೆ. ಸಂಬಂಧಪಟ್ಟವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ನ.ಪಂ. ಮುಖ್ಯಾಧಿಕಾರಿ ಬಸವರಾಜ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಶ್ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.











