ಗಾಂಧಿನಗರ : ಅಟೋ ರಿಕ್ಷಾಗೆ ಹಿಂದಿನಿಂದ ಡಿಕ್ಕಿ ಹೊಡೆದ ಖಾಸಗಿ ಬಸ್

0

ಸರಣಿ ಅಪಘಾತ- ಟ್ರಾಫಿಕ್ ಜಾಮ್

ಗಾಂಧಿನಗರ ಮಸೀದಿ ಬಳಿ ಅಟೋ ರಿಕ್ಷಾಗೆ ಖಾಸಗಿ ಬಸ್ಸು ಡಿಕ್ಕಿ ಹೊಡೆದಿದ್ದು ಆ ಆಟೋರಿಕ್ಷ ಮುಂಭಾಗದಲ್ಲಿದ್ದ ಮತ್ತೊಂದು ಆಟೋಗೆ ಡಿಕ್ಕಿ ಹೊಡೆದು ಆ ಆಟೋ ಮುಂಭಾಗದಲ್ಲಿದ್ದ ಸ್ಕೂಟಿಗೆ ಡಿಕ್ಕಿ ಆಗಿದ್ದು ಸರಣಿ ಅಪಘಾತ ಸಂಭವಿಸಿದ ಘಟನೆ ಇದೀಗ ಸಂಭವಿಸಿದೆ.

ಘಟನೆಯಿಂದ ಯಾವುದೇ ಗಾಯಗಳು ಸಂಭವಿಸಿಲ್ಲ.ಆದರೆ ಸುಮಾರು ಅರ್ಧ ಗಂಟೆಗಳ ಕಾಲ ಹೆದ್ದಾರಿ ರಸ್ತೆ ಸಂಚಾರ ತೊಡಕು ಉಂಟಾಯಿತು.
ಸ್ಥಳಕ್ಕೆ ಪೊಲೀಸರು ಬಂದಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.