ಮೀರಿದ ಸಮಯ ಪೊಲೀಸರಿಂದ ಸಾಂಸ್ಕೃತಿಕ ಕಾರ್ಯಕ್ರಮ ಸ್ಥಗಿತ
ಗುತ್ತಿಗಾರಿನ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ದಲ್ಲಿ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪೊಲೀಸರು ಅರ್ಧಕ್ಕೆ ನಿಲ್ಲಿಸಿದ ಘಟನೆ ಆ.27 ರಾತ್ರಿ ನಡೆದಿದೆ.















ರಾತ್ರಿ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆದಿತ್ತು. ಆ ಬಳಿಕ ಶ್ರೀ ನಂದನ ಕಲಾ ಕುಟುಂಬ ಮೆಟ್ಟಿನಡ್ಕ ಇವರ ಸಾರಥ್ಯದಲ್ಲಿ “ಸಾಂಸ್ಕೃತಿಕ ಕಲಾ ವೈಭವ” ಆರಂಭವಾಗಿ ಸುಮಾರು ಅರ್ಧ ಗಂಟೆ ಆಗಿದ್ದು ಅದಾಗಲೆ ರಾತ್ರಿ 10 ಗಂಟೆ ಮೀರಿದ ಕಾರಣ ಪೊಲೀಸರು ಕಾರ್ಯಕ್ರಮ ಸ್ಥಗಿತಗೊಳಿಸಲು ಸೂಚಿಸಿದ ಮೇರೆಗೆ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾತ್ರಿ 10ಗಂಟೆ ನಂತರ ನಡೆಸಬಾರದು ಎಂದು ಸರ್ಕಾರದ ಆದೇಶವಿರುವ ಹಿನ್ನೆಲೆಯಲ್ಲಿ ಪೊಲೀಸರು ಆಗಮಿಸಿ ಕಾರ್ಯಕ್ರಮ ನಿಲ್ಲಿಸುವಂತೆ ತಿಳಿಸಿದರು. ಒಂದು ಗಂಟೆ ಸಾಂಸ್ಕೃತಿಕ ಕಾರ್ಯಕ್ರಮ ಬಾಕಿ ಇರುವ ಮೊದಲೆ ಕಾರ್ಯಕ್ರಮ ದಿಢೀರ್ ಸ್ಥಗಿತಗೊಳಿಸಿದ ಕಾರಣ
ಸೇರಿರುವ ಭಕ್ತರು ನಿರಾಶೆ ಯಿಂದ ಮನೆಗೆ ತೆರಳಿದರು.










