ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ನಡ ಪೆರಾಜೆ ಶಾಲೆಗೆ ಹಿರಿಯ ವಿದ್ಯಾರ್ಥಿಗಳಿಂದ ಸಿಸಿ ಟಿವಿ ಮತ್ತು ಟ್ರ್ಯಾಕ್ ಪ್ಯಾಂಟ್ ಶರ್ಟ್ ಕೊಡುಗೆಯಾಗಿ ನೀಡಿದ್ದಾರೆ.
ಇದರ ಬಿಡುಗಡೆ ಕಾರ್ಯಕ್ರಮ ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷೆ ಶ್ರೀಮತಿ ನಮಿತಾ ಡಿ.ಜೆ. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.















ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತಿ ಸದಸ್ಯ ಸುರೇಶ ಪೆರುಮುಂಡ,ಎಸ್ ಡಿ ಎಮ್ ಸಿ ಮಾಜಿ ಅಧ್ಯಕ್ಷ ಪಿ ಎನ್ ಅಬೂಬಕರ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉನೈಸ್ ಪೆರಾಜೆ, ಕಾರ್ಯದರ್ಶಿ ರವಿಚಂದ್ರ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಅಬ್ದುಲ್ ನಾಸರ್, ಶಾಲಾ ದೈಹಿಕ ಶಿಕ್ಷಕಿ ಮೀನಾಕ್ಷಿ,ಸಹ ಶಿಕ್ಷಕರಾದ ಭಾಗೀರಥಿ ವಿ ಎಸ್, ಶ್ರೀನಿವಾಸ ಬಿ ಎಂ, ಅಂಗನವಾಡಿ ಶಿಕ್ಷಕಿ ಉಷಾ ಪಿ ಕೆ ಸಹಾಯಕಿ ಜಾನಕಿ ಬಿ ಸಿ ಹಾಗೂ ಅಡುಗೆ ಸಿಬ್ಬಂದಿಯವರಗಳಾದ ವಸಂತಿ, ಚಿತ್ರಕಲಾ ಪಿ ಯು ಮೊದಲಾದವರು ಭಾಗವಹಿಸಿದ್ದರು. ಶ್ರೀನಿವಾಸ್ ಬಿ ಎಂ ಕಾರ್ಯಕ್ರಮ ನಿರೂಪಿಸಿ ಹಿರಿಯ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಅಶೋಕ್ ಪೀಚೆ ವಂದಿಸಿದರು.










