ಆ. 30 : ಅರಂತೋಡು ಗ್ರಾಮ ಪಂಚಾಯತ್‌ನ ಮಾಸಿಕ ಸ್ವಚ್ಚತಾ ಕಾರ್ಯಕ್ರಮದ 75 ನೇ ಸಂಭ್ರಮೋತ್ಸವ ಮತ್ತು ಸಂಘ ಸಂಸ್ಥೆಗಳಿಗೆ ಗೌರವಾರ್ಪಣೆ

0

ಅರಂತೋಡು ಗ್ರಾಮ ಪಂಚಾಯತ್, ರಾಷ್ಟ್ರೀಯ ಸೇವಾ ಯೋಜನೆ ನೆ.ಸ್ಯಾ.ಪ.ಪೂ ಕಾಲೇಜು ಅರಂತೋಡು, ಸುಳ್ಯ ಸುದ್ದಿ ಹಬ್ಬ, ಅರಂತೋಡು ಗ್ರಾಮ ಸಮಿತಿ ಇವುಗಳ ಸಹಯೋಗದಲ್ಲಿ ಅರಂತೋಡು ಗ್ರಾಮ ಪಂಚಾಯತ್‌ನ ಮಾಸಿಕ ಸ್ವಚ್ಚತಾ ಕಾರ್ಯಕ್ರಮದ 75 ನೇ ಸಂಭ್ರಮೋತ್ಸವ ಮತ್ತು ಸಂಘ ಸಂಸ್ಥೆಗಳಿಗೆ ಗೌರವಾರ್ಪಣೆ ಪ್ರಯುಕ್ತ ವಿಶೇಷ ರಾಷ್ಟ್ರೀಯ ಹೆದ್ದಾರಿ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ಆ. ೩೦ರಂದು ಪೂರ್ವಾಹ್ನ: 1೦. 15 ಕ್ಕೆ ಅರಂತೋಡು ನೆ.ಸ್ಮಾ.ಪ.ಪೂ.ಕಾಲೇಜು ಕ್ರೀಡಾಂಗಣದಲ್ಲಿ 1೦.3೦ ರಿಂದ 11.3೦ ರವರೆಗೆ ೪ ತಂಡಗಳಿಂದ ಏಕಕಾಲದಲ್ಲಿ ನಡೆಯಲಿರುವುದು.


ಹೆದ್ದಾರಿ ಸ್ವಚ್ಚತಾ ಕಾರ್ಯಕ್ರಮ ಮತ್ತು ಸ್ವಚ್ಚತಾ ಜಾಥಾ ವಿಶೇಷ ಸಭಾ ಕಾರ್ಯಕ್ರಮ 11.45 ಅಮೃತ ಸಭಾಂಗಣ ಅರಂತೋಡುನಲ್ಲಿ ನಡೆಯಲಿರುವುದು.
ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಅಧ್ಯಕ್ಷತೆ ವಹಿಸಲಿದ್ದಾರೆ.


ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಆರ್., ಅರಂತೋಡು ತೊಡಿಕಾನ ಪ್ರಾ.ಕೃ.ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಅರಂತೋಡು ಪಾಪ್ಯುಲರ್ ಎಜುಕೇಶನ್ ಸೊಸೈಟಿ ಸಂಚಾಲಕ ಕೆ.ಆರ್ ಗಂಗಾಧರ್, ಸುದ್ದಿ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಡಾ.ಯು.ಪಿ. ಶಿವಾನಂದ ಉಪಸ್ಥಿತರಿರುವರು.


ಈ ಸಂದರ್ಭದಲ್ಲಿ ಭಾರತದ ಗಡಿ ಭದ್ರತಾ ಪಡೆಗೆ ಆಯ್ಕೆಯಾಗಿರುವ ಅರಂತೋಡಿನ ಪ್ರಥಮ ಮಹಿಳೆ ಸುಶ್ಮಿತಾ ಎಂ.ಎಂ.ರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.