ಹಳೆಗೇಟು : ಹೆದ್ದಾರಿ ಬಳಿ ವಿದ್ಯುತ್ ತಂತಿಯ ಮೇಲೆ ಬಿದ್ದಿರುವ ಕಾಡು ಬಳ್ಳಿಗಳು

0

ಕಾಡು ಪೊದೆಗಳಿಂದ ಆವರಿಸಿರುವ ವಿದ್ಯುತ್ ಕಂಬಗಳು

ಹಳೆಗೇಟು ಪೆಟ್ರೋಲ್ ಬಂಕ್ ಬಳಿ ಹೆದ್ದಾರಿಯ ತಿರುವಿನಲ್ಲಿ ವಿದ್ಯುತ್ ಕಂಬಗಳು ಕಾಡು ಬಳ್ಳಿಗಳಿಂದ ಆವೃತಗೊಂಡಿದ್ದು ತಂತಿಗಳ ಮೇಲೆ ಬಳ್ಳಿಗಳು ಹಾದು ಹೋಗುತ್ತಿದ್ದು ಸ್ಥಳೀಯರಲ್ಲಿ ಆತಂಕವನ್ನು ಉಂಟು ಮಾಡಿದೆ.

ಕಾಡುಬಳ್ಳಿಗಳ ಭಾರ ತಾಗಲು ಆಗದೆ ವಿದ್ಯುತ್ ತಂತಿಗಳು ರಸ್ತೆ ಕಡೆಗೆ ವಾಲಿ ನಿಂತಿರುವುದು ಕಂಡು ಬರುತ್ತಿದ್ದು ಈ ಬಗ್ಗೆ ಹಲವು ಭಾರಿ ವರದಿಗಳನ್ನು ಮಾಡಿ ಮಾಹಿತಿಯನ್ನು ನೀಡಲಾಗಿದೆ.

ಆ ಸಂಧರ್ಭದಲ್ಲಿ ಈ ಕಂಬದಲ್ಲಿ ಇನ್ನೂ ವಿದ್ಯುತ್ ಸಂಪರ್ಕ ನೀಡಿಲ್ಲ, ಆತಂಕ ಪಡುವ ಅವಶ್ಯಕತೆ ಇಲ್ಲ ಎಂಬ ಉತ್ತರ ಮೆಸ್ಕಾಂ ವತಿಯಿಂದ ಕೇಳಿ ಬರುತ್ತಿದ್ದು,
ವಿದ್ಯುತ್ ಸಂಪರ್ಕ ಇಲ್ಲದಿದ್ದರೂ ಕೂಡ ಕಾಡು ಬಳ್ಳಿಗಳನ್ನು ತೆರವು ಗೊಳಿಸಿ ಕಂಬ ಕೆಳಗೆ ಬೀಳದಂತೆ ಜಾಗೃತಿ ವಹಿಸಲಿ ಎಂದು ಇದೀಗ ಸ್ಥಳೀಯರು ಮಾತನಾಡಿ ಕೊಳ್ಳುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕಾಗಿದೆ.