ಶಿಥಿಲಗೊಂಡ ಓಡಬಾಯಿ ತೂಗುಸೇತುವೆ

0

ಸಂಚಾರ ನಿಷೇಧಿಸಿ ಗ್ರಾ.ಪಂ. ಫಲಕ ಅಳವಡಿಕೆ

ಸುಳ್ಯದ ಓಡಬಾಯಿ ತೂಗುಸೇತುವೆ ಶಿಥಿಲಗೊಂಡಿದ್ದು ಇನ್ನೂ ದುರಸ್ತಿ ಆಗಿಲ್ಲ. ಸೇತುವೆ ಸಂಚಾರ ಅಪಾಯವೆಂದರಿತ ಗ್ರಾಮ ಪಂಚಾಯತ್ ಸಂಚಾರ ನಿಷೇಧಿಸಿ ಸೇತುವೆಯ ಬಳಿ ನಾಮಫಲಕ ಅಳವಡಿಸಿದೆ.

ಈ‌ಕುರಿತು ಗ್ರಾ.ಪಂ. ಪಿಡಿಒ ರವರನ್ನು ಸಂಪರ್ಕಿಸಿ ವಿಚಾರಿಸಿದಾಗ “ಸೇತುವೆ ಶಿಥಿಲವಾಗಿರುವ ಬಗ್ಗೆ ವಾರ್ಡ್ ಸಭೆ, ಗ್ರಾಮ ಸಭೆಗಳಲ್ಲಿ ಚರ್ಚೆಯಾಗಿತ್ತು. ಅಪಾಯ ಸಂಭವಿಸಬಾರದೆಂಬ ಕಾರಣಕ್ಕೆ ಜಾಗೃತಿಗಾಗಿ ಪಂಚಾಯತ್ ನಿಂದ ಫಲಕ ಅಳವಡಿಸಲಾಗಿದೆ ಎಂದು ಹೇಳಿದರು.

ಗ್ರಾ.ಪಂ. ಸದಸ್ಯೆ ಸತ್ಯವತಿ‌ ಬಸವನಪಾದೆಯವರನ್ನು ವಿಚಾರಿಸಿದಾಗ ” ಸೇತುವೆ ದುರಸ್ತಿ ಆಗಲಿದೆ. ಈಗಾಗಲೇ ಅಧಿಕಾರಿಗಳ ತಂಡ ಪರಿಶೀಲನೆ‌ ನಡೆಸಿದೆ. ಜಾಗೃತಿಗಾಗಿ ನಿಷೇಧ ಫಲಕ ಅಳವಡಿಸಲಾಗಿದೆ” ಎಂದು‌ ಹೇಳಿದರು.

ಬಾಲಕೃಷ್ಣ ದೊಡ್ಡೇರಿಯವರು ಪ್ರತಿಕ್ರಿಯಿಸಿ “ಸೇತುವೆ ದುರಸ್ತಿ ಪಡಿಸಬೇಕಾದುದು ಆಡಳಿತದ ಜವಾಬ್ದಾರಿ. ಅದು ಬಿಟ್ಟು ಸಂಚಾರ ನಿಷೇಧ ಕ್ರಮ ಸರಿಯಲ್ಲ. ದೊಡ್ಡೇರಿ ಯಿಂದ ನಡೆದುಕೊಂಡು ಹೋಗುವವರು ಸುತ್ತು ಬಳಸಿ‌ ಸುಳ್ಯ ಬರಬೇಕಾದುದು ಸಾಧ್ಯವಿಲ್ಲ. ಇದಕ್ಕೆ ವ್ಯವಸ್ಥೆ ಮಾಡಬೇಕಲ್ಲವೇ” ಎಂದು‌ ಹೇಳಿದರು.