ಆ. 31 ಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹೊಸ್ತಾರೋಗಣೆ’ (ನವಾನ್ನ ಪ್ರಸಾದ) ಕಾರ್ಯಕ್ರಮ

0

ಅಂದು ಪೂರ್ವಾಹ್ನ ಗಂಟೆ 10.00 ರ ನಂತರ ದೇವರ ದರ್ಶನ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ. 31 ಕ್ಕೆ
‘ಹೊಸ್ತಾರೋಗಣೆ’ (ನವಾನ್ನ ಪ್ರಸಾದ) ಕಾರ್ಯಕ್ರಮ ಜರುಗಲಿದೆ.
ಆ ಪ್ರಯುಕ್ತ ಬೆಳಗ್ಗೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಭಿಷೇಕ, ಹಾಗೂ ಕದಿರು (ತೆನೆ) ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಪ್ರಾತಃಕಾಲ ಗಂಟೆ 5.15 ಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಭಿಷೇಕ, ಪೂರ್ವಾಹ್ನ ಗಂಟೆ 7:30 ಕ್ಕೆ ತೆನೆ ತರುವುದು, ಕದಿರು ಪೂಜೆ ಗಂಟೆ 8.00 ರಿಂದ 9.00 ರ ವರೆಗೆ ದೇವಳದ ನೌಕರರಿಗೆ ಮತ್ತು ಸ್ಥಳೀಯ ಭಕ್ತಾದಿಗಳಿಗೆ ಕದಿರು ವಿತರಣೆ ನಡೆಯಲಿದೆ ‌
ಸದರಿ ದಿನ ಭಕ್ತಾದಿಗಳ ಅಶ್ಲೇಷ ಬಲಿ ಸೇವೆಯು ಬೆಳಗ್ಗೆ ಗಂಟೆ 9.00 ರ ನಂತರ 2 ಪಾಳಿಯಲ್ಲಿ ಮಾತ್ರ ನಡೆಯಲಿರುವುದು. ಭಕ್ತಾದಿಗಳಿಗೆ ದೇವರ ದರ್ಶನ ಪೂರ್ವಾಹ್ನ ಗಂಟೆ 10.00 ರ ನಂತರ ಇರುವುದು.
ಎಲ್ಲ ಭಕ್ತಾದಿಗಳಿಗೆ ದೇವಸ್ಥಾನದ ಭೋಜನ ಶಾಲೆಯಲ್ಲಿ ಹಾಗೂ ಆದಿ ಸುಬ್ರಹ್ಮಣ್ಯ ದೇವಸ್ಥಾನದ ಭೋಜನ ಶಾಲೆಯಲ್ಲಿಯೂ ವಿಶೇಷ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.