ಬಿ.ಜೆ.ಪಿ.ಯವರು ತಾವು ರೈತರ ರಕ್ಷಣೆಗೆ ಮುಂದಾಗಿದ್ದಾರೆ ಅಂತ ಹೇಳಿಕೆ ನೀಡುತ್ತಿದ್ದಾರೆ. ಕರ್ನಾಟಕದಲ್ಲಿ ಈ ತನಕದ ಬಿಜೆಪಿ ಆಡಳಿತದಲ್ಲಿ ರೈತರಿಗೆ ಏನು ಪ್ರಯೋಜನ ಮಾಡಿದೆ ? ” ಎಂದು ಕಾಂಗ್ರೆಸ್ ಮುಖಂಡ ಎಂ.ವೆಂಕಪ್ಪ ಗೌಡರು ಪ್ರಶ್ನಿಸಿದ್ದಾರೆ.















“ರೈತರ ಸಾಲ ಮನ್ನಾ ಮಾಡಿದ್ದೀರಾ? ಈ ಹಿಂದೆ ರೈತರ ಅಡಿಕೆ ಕೃಷಿ ಕೊಳೆ ರೋಗಕ್ಕೆ ತುತ್ತಾದ ಸಂದರ್ಭದಲ್ಲಿ ಎಕರೆ ಒಂದಕ್ಕೆ ರೂ.12,000 ಕೊಡುವುದಾಗಿ ಹೇಳಿ, ಯಾರಿಗಾದರೂ ಕೊಟ್ಟಿದ್ದಾರ ? ಸಹಕಾರಿ ಸಂಘದಲ್ಲಿ 0% ಗೆ ಸಾಲ ಕೊಟ್ಟಿದ್ದಾರ ? ರಸ ಗೊಬ್ಬರಕ್ಕೆ ದರ ಕಡಿಮೆ ಮಾಡಿದ್ದಾರ ? ಬದಲಿಗೆ ಅಡಿಕೆ ಕೃಷಿ ಹಳದಿ ರೋಗಕ್ಕೆ ತುತ್ತಾದ ಸಂದರ್ಭ ರಾಜ್ಯ ಸಚಿವರನ್ನು ಹಾಗೂ ಅಧಿಕಾರಿಗಳನ್ನು ಕರೆದು ಕೊಂಡು ಬಂದು ‘ ಹಳದಿ ರೋಗ ತಪ್ಪಿಸಲು ಅಡಿಕೆ ಮರದ ಸೋಗೆ ಕಡಿಯಬೇಕು ‘ ಎಂದು ಸಲಹೆ ಕೊಟ್ಟು, ‘ ನೆಗಡಿ ಬಂದವರಿಗೆ ಔಷಧಿ ಕೊಡುವ ಬದಲು ಮೂಗು ಕತ್ತರಿಸಿ ‘ ಎಂಬಂತೆ ಸೂಚಿಸಿದ್ದರು. ಸಾಲದ್ದಕ್ಕೆ , ಸುಳ್ಯದ ಸಚಿವರು ಅಡಿಕೆಗೆ ಪರ್ಯಾಯವಾಗಿ ಮೀನು ಸಾಕಣೆ ಮಾಡಿ ಅಂತ ಹೇಳಿ ಮೀನು ಮರಿಗಳನ್ನು ಮತ್ತು ಅದರ ಸಾಗಣೆಗೆ ವಾಹನ ಕೊಟ್ಟಿದ್ದೇ ಬಂತು. ಅಡಿಕೆ ಕೃಷಿಗೆ ಪರ್ಯಾಯವಾಗಿ ಬೆಳೆಸಿದ ಮೀನು ಕೃಷಿ ಏನಾಯಿತು ಅಂತ ಬಿಜೆಪಿ ಅಧ್ಯಕ್ಷರನ್ನು ಕೇಳುವುದರಲ್ಲಿ ಏನಾದರೂ ತಪ್ಪಿದೆಯಾ ?” ಎಂ.ವೆಂಕಪ್ಪ ಗೌಡರು ಪ್ರತಿಕ್ರಿಯಿಸಿದ್ದಾರೆ.










