Home Uncategorized ನಿವೃತ್ತ ಮುಖ್ಯೋಪಾಧ್ಯಾಯ ಸುಬ್ಬಪ್ಪ ಗೌಡ ಚೆಮ್ನೂರುರವರಿಗೆ ಶ್ರದ್ಧಾಂಜಲಿ – ವೈಕುಂಠ ಸಮಾರಾಧನೆ

ನಿವೃತ್ತ ಮುಖ್ಯೋಪಾಧ್ಯಾಯ ಸುಬ್ಬಪ್ಪ ಗೌಡ ಚೆಮ್ನೂರುರವರಿಗೆ ಶ್ರದ್ಧಾಂಜಲಿ – ವೈಕುಂಠ ಸಮಾರಾಧನೆ

0

ಐವರ್ನಾಡು ಗ್ರಾಮದ ನಿವೃತ್ತ ಮುಖ್ಯೋಪಾಧ್ಯಾಯ,ಪ್ರಗತಿಪರ ಕೃಷಿಕ ಸುಬ್ಬಪ್ಪ ಗೌಡ ಚೆಮ್ನೂರುರವರು ಆ.11 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆಯು ಆ.28 ರಂದು ಸುಳ್ಯ ಅಂಬಟೆಡ್ಕ ಗಿರಿದರ್ಶಿನಿ ಸಭಾಭವನದಲ್ಲಿ ನಡೆಯಿತು.
ಚಿತ್ರಕಲಾ ಶಿಕ್ಷಕ ಪ್ರಸನ್ನ ಐವರ್ನಾಡು ರವರು ಮಾತನಾಡಿ ದಿ.ಸುಬ್ಬಪ್ಪ ಗೌಡರು ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ 37 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ್ದಾರೆ ಎಂದು ಹೇಳಿ ಅವರ
ಆದರ್ಶ ಗುಣಗಳ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.


ಆಗಮಿಸಿದ ನೂರಾರು ಜನರು ದಿ.ಸುಬ್ಬಪ್ಪ ಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ
ಮೃತರ ಪುತ್ರರಾದ ಭೋಜಪ್ಪ ಗೌಡ ಚೆಮ್ನೂರು,ಪ್ರಭಾಕರ ಗೌಡ, ದಯಾನಂದ ಗೌಡ, ಪುತ್ರಿಯರಾದ ಶ್ರೀಮತಿ ಹೇಮಲತಾ ಕೇಶವ ಕೊಳಲುಮೂಲೆ,ಶ್ರೀಮತಿ ತಾರಾಮಣಿ ಗಿರೀಶ್ ಕನ್ನಡ್ಕ ಹಾಗೂ ಸೊಸೆಯಂದಿರಾದ ಶ್ರೀಮತಿ ಭಾಗೀರಥಿ ಚೆಮ್ನೂರು ,ಶ್ರೀಮತಿ ಸ್ವರ್ಣಲತಾ ಚೆಮ್ನೂರು,ಶ್ರೀಮತಿ ಜಯಲಕ್ಷ್ಮೀ ಚೆಮ್ನೂರು, ಅಳಿಯಂದಿರು, ಮೊಮ್ಮಕ್ಕಳು,ಕುಟುಂಬಸ್ಥರು ಉಪಸ್ಥಿತರಿದ್ದರು.

NO COMMENTS

error: Content is protected !!
Breaking