ಶಾಂತಿನಗರ ದೀಪಾಂಜಲಿ ಮಹಿಳಾ ಮಂಡಲದ ಪದಗ್ರಹಣ ಸಮಾರಂಭವು ಶಾಂತಿನಗರದ ವಠಾರದಲ್ಲಿ ಶ್ರೀಮತಿ ಲಲಿತಾ ಎಂ.ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನಿವೃತ್ತ ಶುಶ್ರೂಷಾಧಿಕಾರಿ ದೇವಕಿ ಸೋಣಂಗೇರಿಯವರು ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.
ವೇದಿಕೆಯಲ್ಲಿ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಶ್ರೀಮತಿ ಹರ್ಷ ಕರುಣಾಕರ ಸೇರ್ಕಜೆ, ಶ್ರೀಮತಿ ಹೇಮಲತಾ ದೇಂಗೋಡಿ ಉಪಸ್ಥಿತರಿದ್ದರು.















ಮಹಿಳೆಯರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಮಹಿಳಾ ಮಂಡಲದ ಖಜಾಂಜಿ ಶೋಭಾ ಗೋಪಾಲ್‌ರವರ ಪತಿಯವರಿಗೆ ಅನಾರೋಗ್ಯದ ಕಾರಣಕ್ಕಾಗಿ ರೂ. ೨೦೦೦ವನ್ನು ಧನಸಹಾಯ ನೀಡಲಾಯಿತು. ಕಾರ್ಯದರ್ಶಿ ಬಿಂದು ಚಂದ್ರನ್‌ರವರ ಪುತ್ರಿ ಪ್ರಜ್ಞಾರಿಗೆ ಫಲ ತಾಂಬೂಲ ನೀಡಿ ರೂ. ೧೦೦೦ ಧನಸಹಾಯ ನೀಡಲಾಯಿತು.
ಶ್ರೀಮತಿ ರಾರಾಜಲಕ್ಷ್ಮಿ ರಾಮಕೃಷ್ಣ ಶಾಂತಿನಗರ ಹಾಗೂ ಸುನಿತಾ ಚಂದ್ರಶೇಖರ್ ಶಾಂತಿನಗರ ಇವರು ಮಹಿಳಾ ಮಂಡಲಕ್ಕೆ ನಿರ್ದೇಶಕರಾಗಿ ಆಯ್ಕೆಯಾದರು.
ಸಭಾಧ್ಯಕ್ಷೆ ಸ್ವಾಗತಿಸಿ, ನೂತನ ಅಧ್ಯಕ್ಷೆ ಶಾಲಿನಿ ಭಾನುಪ್ರಕಾಶ್ ವಂದಿಸಿದರು.










