ಹಳೆಗೇಟು ಸಾಂಸ್ಕೃತಿಕ ಸಂಘ (ರಿ.) ವತಿಯಿಂದ ಶ್ರೀ ಗಣೇಶೋತ್ಸವ

0

ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ, ಭಕ್ತಿ ಗೀತೆ ಸಂಗಮ

ಇಂದು ಸಂಜೆ ವೈಭವದ ಶೋಭಾಯಾತ್ರೆ, ಜಲಸ್ಥಂಭನ

ಹಳೆಗೇಟು ಸಾಂಸ್ಕೃತಿಕ ಸಂಘ (ರಿ.) ವತಿಯಿಂದ 42 ನೇ ವರ್ಷದ
ಸಾರ್ವಜನಿಕ ಗಣೇಶೋತ್ಸವದ
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಭಕ್ತಿ ಗೀತೆ ಸಂಗಮ ಮತ್ತು ಮಿಲಿನಿಯಂ ಆರ್ಕೆಸ್ಟ್ರಾ ಸಂಘದ ರಸ ಮಂಜರಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಆ.27 ರಂದು ಸಂಜೆ ಶಾಂತಿನಗರ ದೀಪಾಂಜಲಿ ಮಹಿಳಾ ಭಜನ ಮಂಡಲ
ಇವರಿಂದ ಭಜನಾ ಕಾರ್ಯಕ್ರಮ ನಡೆದು ಉದ್ಘಾಟನಾ ಸಮಾರಂಭ ನಡೆಯಿತು.
ಪ್ಯೂಶನ್ ಡಾನ್ಸ್ ತಂಡದ ಚಿಣ್ಣರಿಂದ ವಸಂತ ಕಾಯರ್ತೋಡಿ ಇವರ ಸಾರಥ್ಯದಲ್ಲಿ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು.
ಬೆಟ್ಟಂಪಾಡಿ ಕಲಾವಿದರಿಂದ ಚಿಣ್ಣರ ಕಲರವದ ಮೆರುಗು ನಡೆದು ಮಹಾಪೂಜೆ
ರಾತ್ರಿ ಗಂಟೆ 9-30ಕ್ಕೆ ನಡೆಯಿತು.

ಆ 28 ರಂದು ಸಂಜೆ 6 ಗಂಟೆಗೆ
ಜಯನಗರ ಗಜಾನನ ಭಜನಾ ಸಂಘದ ವತಿಯಿಂದ
ಭಜನಾ ಕಾರ್ಯಕ್ರಮ ನಡೆಯಿತು.
ರಾತ್ರಿ 7 ಗಂಟೆಗೆ ಮಿಲೇನಿಯಂ ಆರ್ಕೆಸ್ಟ್ರಾ ಕಲಾವಿದರಿಂದ
ಭಕ್ತಿ ಹಾಗೂ ಚಿತ್ರಗೀತೆಗಳ ಸಂಗಮ ನಡೆದು ರಾತ್ರಿ 10 ಗಂಟೆಗೆ ಮಹಾಪೂಜೆ ನಡೆಯಿತು.

ಇಂದು ಸಂಜೆ ವೈಭವದ ಶೋಭಾಯಾತ್ರೆ

ಇಂದು ಸಂಜೆ 5 ಗಂಟೆಗೆ ವೈಭವದ ಶೋಭಾಯಾತ್ರೆ ನಡೆದು ಬಳಿಕ ಶ್ರೀ ಗಣಪತಿಯ ಜಲಸ್ಥಂಭನ ನಡೆಯಲಿದೆ.
ಹಳೆಗೇಟು,ಶ್ರೀರಾಂಪೇಟೆ,ಶ್ರೀ ಚೆನ್ನಕೇಶವ ದೇವಸ್ಥಾನ ರಸ್ತೆ, ವಿವೇಕಾನಂದ ಸರ್ಕಲ್ ಬಳಿಕ ಮಿಲಿಟಿ ಗ್ರೌಂಡ್ ಮೂಲಕ ಬ್ರಹ್ಮರಗಯದ ಬಳಿ ತೆರಳಿ ಅಲ್ಲಿ ಜಲಸ್ಥಂಭನ ಗೊಳ್ಳಲಿದೆ.