⬆️ ಜಾತಿ ,ಪಂಥ ಮೀರಿ ರಾಷ್ಟ್ರ ಚಿಂತನೆಗೆ ಗಣೇಶೋತ್ಸವ ಪ್ರೇರಣೆಯಾಗಲಿ ; ಉದಯಭಾಸ್ಕರ್
ಹತ್ತು ಗಂಟೆಗಿಂತ ಮೂರು ನಿಮಿಷ ಮೊದಲೇ ಮುಗಿದ ಸಾಂಸ್ಕೃತಿಕ ಕಾರ್ಯಕ್ರಮ
⬆️ ಇಂದು (ಆ.29) : ವೈಭವದ ಶೋಭಾಯಾತ್ರೆ

ಸಾರ್ವಜನಿಕ ಆರಾಧನಾ ಸಮಿತಿ ಪಂಜ,ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ-2025 ಇದರ ವತಿಯಿಂದ ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ವಠಾರದಲ್ಲಿ ಆ.27 ರಂದು ಆರಂಭಗೊಂಡು ಆ.29 ತನಕ ವಿಜೃಂಭಣೆಯಿಂದ ನಡೆಯಲಿದೆ.
ಆ.28.ರಂದು ಸಂಜೆ ಸಭಾ ಕಾರ್ಯಕ್ರಮ ನಡೆಯಿತು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಗುರುಪ್ರಸಾದ್ ತೋಟ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಕೃತಿ ಚಿಂತಕ ಉದಯಭಾಸ್ಕರ್ ಸುಳ್ಯ ಉಪನ್ಯಾಸ ನೀಡಿ “ಮನೆಯೊಳಗೆ ಆರಾಧಿಸುತ್ತಿದ್ದ ಗಣೇಶನನ್ನು ಸಾರ್ವಜನಿಕವಾಗಿ ಆರಾಧಿಸಲು ಬಾಲಗಂಗಾಧರ ತಿಲಕರು ತಂದ ಉದ್ದೇಶ ರಾಷ್ಟ್ರ ಚಿಂತನೆಗಾಗಿ ಆಗಿತ್ತು. ಎಲ್ಲಾ ಜಾತಿ,ಪಂಥ ,ಸಮುದಾಯಗಳು ಮೇಲು ಕೀಳು ಭಾವನೆಗಳ ಮರೆತು ಒಟ್ಟಾಗಿ ಸೇರಿ ಉತ್ತಮ ರಾಷ್ಟ್ರ ನಿರ್ಮಾಣದ ಚಿಂತನೆಗಾಗಿ ಗಣೇಶೋತ್ಸವ. ಈ ದೇಶಕ್ಕೆ ಜಾತಿ, ಸಮುದಾಯಗಳ ತಮ್ಮ
ಅಪಾರ ಸಾಂಸ್ಕೃತಿಗಳ ಕೊಡುಗೆಗಳನ್ನು ಕೊಟ್ಟಿವೆ” ಎಂದು ಅವರು ಹೇಳಿದರು.
















ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಸಾರ್ವಜನಿಕ ಆರಾಧನಾ ಸಮಿತಿಯ ಅಧ್ಯಕ್ಷ ಸವಿತಾರ ಮುಡೂರು, ಗೌರವಾಧ್ಯಕ್ಷ ಮಾಧವ ಗೌಡ ಜಾಕೆ, ಕಾರ್ಯದರ್ಶಿ ಜಯರಾಮ ಕಲ್ಲಾಜೆ, ಗಣೆಶೋತ್ಸವ ಸಮಿತಿ ಕಾರ್ಯದರ್ಶಿ ಜೀವನ್ ಶೆಟ್ಟಿಗದ್ದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀಮತಿ ಗೀತಾಸುಧಾ ತೋಟ ಪ್ರಾರ್ಥಿಸಿದರು. ಸವಿತಾರ ಮುಡೂರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು . ತೀರ್ಥಾನಂದ ಕೊಡೆಂಕಿರಿ ನಿರೂಪಿಸಿದರು ಜೀವನ್ ಶೆಟ್ಟಿಗದ್ದೆ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕು.ಸುಮಾ ಕೋಟೆ ರವರಿಂದ ಗಾನ ಸುಧೆ, ಗುರುದೇವ್ ಅಕಾಡಮಿ ಆಫ್ ಫೈನ್ ಆರ್ಟ್ಸ್ ಮಂಡ್ಯ ಮತ್ತು ಮೈಸೂರು ಕಲಾವಿದರಿಂದ ನೃತ್ಯ ವೈವಿಧ್ಯ ಪ್ರದರ್ಶನ ಗೊಂಡಿತು.
ಉತ್ಸವ ಕಾರ್ಯಕ್ರಮದಲ್ಲಿ ಬೆಳಗ್ಗಿನ ಪೂಜೆ ಪ್ರಸಾದ ವಿತರಣೆ, ಭಜನಾ ಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ. ಅಪರಾಹ್ನ ಭಜನಾ ಸಂಕೀರ್ತನೆ, ಸಂಜೆ ಕುಣಿತ ಭಜನೆ, ರಾತ್ರಿ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.

ನಿಗದಿ ಪಡಿಸಿದ ಸಮಯಕ್ಕಿಂತಲೂ ಮೂರು ನಿಮಿಷ ಮೊದಲೇ ಮುಗಿದ ಸಾಂಸ್ಕೃತಿಕ ಕಾರ್ಯಕ್ರಮ
ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾತ್ರಿ 10 ಗಂಟೆಯ ಒಳಗೆ ಮುಗಿಸುವಂತೆ ಪೋಲೀಸ್ ಇಲಾಖೆ ಸೂಚನೆ ಇತ್ತು. ಹೀಗಾಗಿ ಎಲ್ಲ ಕಾರ್ಯಕ್ರಮಗಳ ಸಮಯವನ್ನು ಪ್ರೀ ಪೋನ್ ಮಾಡಿ ಮರು ನಿಗದಿಗೊಳಿಸಲಾಗಿತ್ತು. ಸಮಯವನ್ನು ಪಾಲಿಸಿ ರಾತ್ರಿ 9.57 ರ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಗಿದು ಬಳಿಕ ಮಹಾ ಮಂಗಳಾರತಿ ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನ ಗೆದ್ದಿತ್ತು.
ಆ.29 : ಶೋಭಾಯಾತ್ರೆ:
ಆ.29 ರಂದು ಬೆಳಗಿನ ಪೂಜೆ, ಭಜನಾ ಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಜರುಗಲಿದೆ.

ಸಂ.ಗಂ. 3ರಿಂದ ವೈಭವದ ಶೋಭಾಯಾತ್ರೆಯು ದೇಗುಲದ ವಠಾರದಿಂದ ಪಂಜ ಪೇಟೆಯ ಮೂಲಕ ಮುಖ್ಯರಸ್ತೆಯಲ್ಲಿ ಸಾಗಿ ಪಂಜ ಹೊಳೆಯ ಸೇತುವೆ ಬಳಿ ಜಲಸ್ತಂಭನ ಜರುಗಲಿದೆ. ಶೋಭಾಯಾತ್ರೆಯಲ್ಲಿ
ತುಳುನಾಡಿನ ಹೆಮ್ಮೆಯ ಹುಲಿ ವೇಷ, ಕೀಲು ಕುದುರೆ ,ಕುಣಿತ ಭಜನೆ, ನಾಸಿಕ್ ಬ್ಯಾಂಡ್ ಮೊದಲಾದ ತಂಡಗಳು ಪಾಲ್ಗೊಳ್ಳಲಿವೆ.










