ಮೂಡೆಕಲ್ಲು ಮನೆಯಲ್ಲಿ ಪೂಜಿಸುವ ಗಣಪನಿಗೆ 14ನೇ ವರ್ಷದ ಸಂಭ್ರಮ

0

ಕಲಾವಿದ ಅಮೃತ್ ಸಾಲಿಯಾನ್ ಕೈಯಲ್ಲಿ ಮೂಡಿಬಂದ ಪುಟ್ಟ ಗಣಪನಿಗೆ ಪೂಜೆ-ಭಜನೆ

ದುಗ್ಗಲಡ್ಕ ಸಮೀಪದ ಮೂಡೆಕಲ್ಲು ಮನೆಯಲ್ಲಿ ಪೂಜಿಸುವ ಪುಟ್ಟ ಗಣೇಶನಿಗೆ 14ನೇ ವರುಷದ ಸಂಭ್ರಮ.

ಮೂಡೆಕಲ್ಲು ಸೋಮಪ್ಪ ಪೂಜಾರಿ ಮನೆಯಲ್ಲಿ ಕಲಾವಿದ ಅಮೃತ್ ಸಾಲಿಯಾನ್ ಕಳೆದ 14 ವರ್ಷಗಳಿಂದ ಗಣೇಶ ವಿಗ್ರಹ ರಚನೆ ಮಾಡಿಕೊಂಡು ಬರುತ್ತಿದ್ದು, ಪುಟ್ಟ ಗಣಪನನ್ನು ಆ.28ರಂದು ಸಂಜೆ ಪ್ರತಿಷ್ಠಾಪಿಸಿ, ಪೂಜೆ , ಭಜನೆ ನಡೆಸಿ ಜಲಸ್ಥಂಭನಗೊಳಿಸಲಾಯಿತು.


ದುಗ್ಗಲಡ್ಕದ ಅಯ್ಯಪ್ಪ ಭಜನಾ ಮಂದಿರದವರು ಭಜನೆ ನಡೆಸಿದರು. ಸುಂದರ ರಾವ್ ಕೊಡೆಂಚಡ್ಕ ಪೂಜಾ ಕಾರ್ಯ ನಿರ್ವಹಿಸಿದರು. ಮನೆಯವರು, ಬಂಧು ಮಿತ್ರರು ಉಪಸ್ಥಿತರಿದ್ದರು.