ಕುಣಿತ ಭಜನೆ , ನಾಸಿಕ್ ಬ್ಯಾಂಡ್ ಗೆ, ಮೆರುಗು ನೀಡಿದ ಭಕ್ತಾಧಿಗಳು: ಚೌಕಿಯಲ್ಲಿ ಜಲಸ್ತಂಭನ

ಕೊಡಗು ಸಂಪಾಜೆ ಸಾವರ್ಜನಿಕ ಶ್ರೀ ದೇವತಾರಾಧನ ಸಮಿತಿ ವತಿಯಿಂದ 32 ನೇ ವರ್ಷದ ಗೌರಿ ಗಣೇಶೋತ್ಸವ ಶೋಭಾಯಾತ್ರೆಯು ಅದ್ಧೂರಿಯಿಂದ ಆ.27 ರಂದು ನಡೆಯಿತು.
















ಸಂಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಗೌರಿ ಗಣೇಶ ಮೂರ್ತಿಗೆ ವಿಶೇಷ ಪೂಜೆ ಮಾಡಿ , ತೆಂಗಿನ ಕಾಯಿ ಹೊಡೆದು , ಭಾರತ ಮಾತೆಯ ಭಾವಚಿತ್ರ , ಭಕ್ತಾಧಿಗಳ ಕುಣಿತ ಭಜನೆ , ಮಂಜು ಬ್ರದರ್ಸ್ ನಾಸಿಕ್ ಬ್ಯಾಂಡ್ , ವಿವಿಧ ವೇಷ ಭೂಷಣಗಳೊಂದಿಗೆ, ಪುಷ್ಪಾಲಂಕೃತ ಭವ್ಯ ರಥದೊಂದಿಗೆ ಶೋಭಾಯಾತ್ರೆಯು ಚಡಾವಿನ ವರೆಗೆ ಹೋಗಿ, ಮರಳಿ ಚೌಕಿಯ ಹೊಳೆಯ ಸಂಗಮದಲ್ಲಿ ಬಂದು ಗೌರಿ ಗಣೇಶ ಮೂರ್ತಿಯನ್ನು ಜಲಸ್ತಂಭನ ಮಾಡಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ , ಸರ್ವಸದಸ್ಯರು, ಊರ ಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು.










