ವೆಂಕಟ್ ವಳಲಂಬೆ ಪ್ರತಿಕ್ರಿಯೆ
” ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರ ದೂರದೃಷ್ಟಿಯ ಸರ್ವಾಂಗೀಣ ಅಭಿವೃದ್ದಿಗೆ ತಣ್ಣೀರು ಎರಚುವ ಮತ್ತು ಭಾರತೀಯ ಜನತಾ ಪಾರ್ಟಿ ನೇತೃತ್ವದ ಕೇಂದ್ರ ಸರಕಾರದ ಯಾವುದೇ ಜನಪರ ಯೋಜನೆಗಳನ್ನು ಟೀಕಿಸುವುದೇ ವೆಂಕಪ್ಪ ಗೌಡರ ಜಾಯಮಾನ ” ಎಂದು ಬಿ.ಜೆ.ಪಿ. ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಪ್ರತಿಕ್ರಿಯಿಸಿದ್ದಾರೆ.















25 ಕೋಟಿ ವೆಚ್ಚದಲ್ಲಿ ಸಿ.ಪಿ.ಸಿ.ಆರ್.ಐ. ಮೂಲಕ ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿ ಸಲ್ಲಿಸಿ , ರೈತರ ಅಡಿಕೆಗೆ ನಿಮ್ಮ ಸರಕಾರವಿರುವಾಗ ಇದ್ದ ಒಪ್ಪಂದವನ್ನು ರದ್ದುಪಡಿಸಿ, ಆಮದಾಗುವ ಅಡಿಕೆಗೆ ಶುಲ್ಕವನ್ನು ಜಾಸ್ತಿ ಮಾಡಿದ ಹೆಗ್ಗಳಿಕೆ ನಮ್ಮ ಕಾರ್ಯಕರ್ತರು ನಿರ್ವಹಿಸುವ ಕ್ಯಾಂಪ್ಕೋ ಸಂಸ್ಥೆಗೆ ಇದೆ.
ಇದೆಲ್ಲವೂ ದಕ್ಷಿಣ ಕನ್ನಡ ಜಿಲ್ಲೆಯ ನೊಂದ ರೈತರಿಗೆ ಅರಿವಿದೆ. ಸಂಸದ ಕ್ಯಾ.ಚೌಟರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಫಿ ಬೆಳೆಯಬಹುದೇ ಎಂಬ ಕಾರ್ಯಾಗಾರ ಸುಳ್ಯದಲ್ಲಿ ಕಾಪಿಕೊ ಎಂಬ ಹೆಸರಿನಲ್ಲಿ ನಡೆಯಿತು. ಈ ಕಾರ್ಯದಲ್ಲಿ ಪೂರ್ಣವಾಗಿ ರೈತರ ಬದುಕು ಕಟ್ಟಿಕೊಳ್ಳುವುದು ಅಸಾಧ್ಯವಾದರೂ, ನೊಂದ ರೈತರಿಗೆ ಆತ್ಮವಿಶ್ವಾಸ ತುಂಬಲು ಸಾಧ್ಯ. ವೆಂಕಪ್ಪ ಗೌಡರು ಹೇಳಿದಂತೆ ರೈತರನ್ನು ತಪ್ಪು ದಾರಿಗೆ ಎಳೆಯುವ ಕಾರ್ಯಕ್ರಮ ಇದಲ್ಲ. ಇವರು ಹೇಳಿದಂತೆ ಪೂರ್ಣ ಅಡಿಕೆಯನ್ನು ಕಡಿದು ಕಾಫಿ ಬೆಳೆಯಲು ಎಲ್ಲೂ ಹೇಳಿಲ್ಲ. ಅಡಿಕೆ ತೋಟದ ಮಧ್ಯೆ ಉಪಬೆಳೆಯಾಗಿ ಕಾಫಿ ಬೆಳೆಯಲು ಆಸಕ್ತ ರೈತರಿಗೆ ಉತ್ತೇಜನ ನೀಡಿ ಕಾಫಿ ಬೆಳೆಯಲು ಸ್ಪೂರ್ತಿ ನೀಡಿರುವುದಷ್ಟೇ. ಮುಂದೆ ಈ ಕಾರ್ಯವನ್ನು ಹಳ್ಳಿಹಳ್ಳಿಯ ರೈತರಿಗೆ ಸಹಕಾರಿ ಸಂಘಗಳ ಮುಖಾಂತರ ಕೃಷಿಯ ಮಾರ್ಗದರ್ಶನ ಮಾಡುವವರಿದ್ದೇವೆ. ಆ ಸಮಯದಲ್ಲಿ ನಿಮ್ಮ ಸಹಕಾರವನ್ನು ಕ್ಷೇತ್ರಕ್ಕೆ ನೀಡಿದರೆ ಈ ಮಣ್ಣಿನ ರೈತರು ಕ್ಷಮಿಸಬಹುದು. ಇಲ್ಲವಾದಲ್ಲಿ ಮುಂದೆ ನೀವು ಮತ್ತು ನಿಮ್ಮ ಪಾರ್ಟಿ ಸ್ವಾತಂತ್ರ್ಯ ಬಂದು 75 ವರ್ಷ ಗಳ ಕಾಲ ಮಾಡಿದ್ದನ್ನೇ ಮಾಡಿದರೆ ಅನುಭವಿಸಬೇಕಾಗುತ್ತದೆ” ಎಂದಿರುವ ವಳಲಂಬೆ, ” ವೆಂಕಪ್ಪ ಗೌಡರು ಒಂದು ಪ್ರಸಿದ್ಧ ದೇವಾಲಯದ ಆಡಳಿತ ಮೊಕ್ತೇಸರರಾಗಿ ಧಾರ್ಮಿಕ ಕಾರ್ಯದ ಮೂಲಕ ಹಿಂದೂ ಧರ್ಮದ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಹೋಗುತ್ತಾರೆಂದು ಭಾವಿಸಿದ್ದೆ. ಆದರೆ ಧಾರ್ಮಿಕ ಕ್ಷೇತ್ರದಲ್ಲಿದ್ದೂ ರಾಜಕೀಯವನ್ನೇ ಮಾಡಬೇಕೆಂದಿದ್ದರೆ ಅದಕ್ಕೆ ರಾಜೀನಾಮೆ ನೀಡಿ ಹೊರಬರಲಿ. ಬಹಿರಂಗ ಚರ್ಚೆಗೆ ನಾವು ಸಿದ್ಧ ” ಎಂದು ತೀಕ್ಷ್ಣ ಪ್ರತ್ಯುತ್ತರ ನೀಡಿದ್ದಾರೆ.









