ಕಳಂಜ ತಿಮ್ಮಪ್ಪ ಗೌಡರಿಗೆ ಮನೆ ಹಸ್ತಾಂತರ

0

ಕಳಂಜ ಗ್ರಾಮದ ವಿಷ್ಣುನಗರ ತಿಮ್ಮಪ್ಪ ಗೌಡ ಎಂಬವರ ಮನೆ ಶಿಥಿಲಾವಸ್ಥೆಯಲ್ಲಿದ್ದು ಕಳಂಜ ಗ್ರಾ.ಪಂ, ಸಂಘ ಸಂಸ್ಥೆಗಳ ಹಾಗೂ ಊರವರ ಸಹಕಾರದಿಂದ ಮನೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ಇಂದು ಅವರಿಗೆ ಮನೆಯನ್ನು ಹಸ್ತಾಂತರಿಸಲಾಯಿತು.


ಈ ಮನೆ ನಿರ್ಮಾಣದ ನೇತೃತ್ವ ವಹಿಸಿದ್ದ ಗ್ರಾಂ.ಪಂ ಅಧ್ಯಕ್ಷ ಬಾಲಕೃಷ್ಣ ಬೇರಿಕೆಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಎಸ್.ಎನ್ ಮನ್ಮಥ, ರುಕ್ಮಯ ಗೌಡ ಕಟ್ಟತ್ತಾರು, ಮುಗುಪ್ಪು ಕೂಸಪ್ಪ ಗೌಡ, ಚೆನ್ನಪ್ಪ ಗೌಡ ಕಜೆಮೂಲೆ, ಲಕ್ಷ್ಮಣ ಗೌಡ ಬೇರಿಕೆ, ನಾರಾಯಣ ಶೇಡಿಕಜೆ, ರವಿಪ್ರಸಾದ್ ರೈ ಕಳಂಜ, ಗಿರಿಧರ ಕಳಂಜ ಮತ್ತು ಬೆಳ್ಳಾರೆ ರೋಟರಿ ಕ್ಲಬ್ ಪದಾಧಿಕಾರಿಗಳು ಹಾಗೂ ಊರವರು ಉಪಸ್ಥಿತರಿದ್ದರು.