ಹಳೆಗೇಟು: ಸಾಂಸ್ಕೃತಿಕ ಸಂಘದ ಗಣೇಶೋತ್ಸವ ಶ್ರೀ ಗಣೇಶನ ವೈಭವದ ಶೋಭಾಯಾತ್ರೆ

0

ನಾಸಿಕ್ ಬ್ಯಾಂಡ್ , ವಾದ್ಯ, ಸಿಡಿ ಮದ್ದಿನ ಅಬ್ಬರ,ವಿವಿಧ ವೇಷ ಭೂಷಣಗಳ ಕುಣಿತ

ಬಿರುಸಿನ ಮಳೆಯಲ್ಲಿಯೂ ಸಾಗಿ ಬಂದ ಗಣಪ

ಹಳೆಗೇಟು ಸಾಂಸ್ಕೃತಿಕ ಸಂಘ 42 ನೇ ವರ್ಷದ ಶ್ರೀ ಗಣೇಶೋತ್ಸವವು ಭಕ್ತಿ ,ಸಂಭ್ರಮದಿಂದ ಆ.27 ರಿಂದ ಆ.29 ರ ವರೆಗೆ ಹಳೆಗೇಟು ವಸಂತ ಕಟ್ಟೆ ಯಲ್ಲಿ ನಡೆಯಿತು.

ಆ.29 ರಂದು ಸಂಜೆ ಶ್ರೀ ದೇವರ ವೈಭವದ ಶೋಭಾಯಾತ್ರೆ ನಡೆಯಿತು.
ಶೋಭಾಯಾತ್ರೆಯಲ್ಲಿ ಗೊಂಬೆ ಬಳಗ ,ಸಿಡಿಮದ್ದಿನ ಪ್ರದರ್ಶನ,ಬ್ಯಾಂಡ್ ವಾದ್ಯದ ಅಬ್ಬರ,ವಿವಿಧ ವೇಷಭೂಷಣಗಳ ಕುಣಿತ ದೊಂದಿಗೆ ವೈಭವದಿಂದ ಶ್ರೀ ಗಣೇಶನ ಶೋಭಾಯಾತ್ರೆ ಸುಳ್ಯ ಮುಖ್ಯ ರಸ್ತೆಯಲ್ಲಿ ಸಾಗಿ ಶ್ರೀ ಚೆನ್ನಕೇಶವ ದೇವಸ್ಥಾನ ರಸ್ತೆ, ವಿವೇಕಾನಂದ ಸರ್ಕಲ್, ಮರಳಿ ಹಳೆಗೇಟು ಮೂಲಕ ಹೊಸಗದ್ದೆ ಬ್ರಹ್ಮರಗಯ ನದಿಯಲ್ಲಿ ಜಲಸ್ತಂಭನ ಗೊಂಡಿತು.

ಸಂಜೆ ಯಿಂದಲೇ ಬಿರುಸಿನ ಮಳೆ ಬರುತ್ತಿದ್ದರೂ ಲೆಕ್ಕಿಸದೆ ಬ್ಯಾಂಡ್, ಕುಣಿತ,ಸಿಡಿಮದ್ದಿ ನ ಶಬ್ದದೊಂದಿಗೆ ಗಣಪನ ಸವಾರಿ ಅಬ್ಬರದಿಂದಲೇ ಸಾಗಿತು.

ಈ ಸಂಧರ್ಭದಲ್ಲಿ ಸಮಿತಿಯ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ, ಉಪಾಧ್ಯಕ್ಷ ಗಣೇಶ್ ಕೊಯಿಂಗೋಡಿ,ಪ್ರಧಾನ ಕಾರ್ಯದರ್ಶಿ ಶ್ರೀಜೇಶ್,ಖಜಾಂಜಿ ಚಿತ್ತ ರಂಜನ್,ಸಹ ಕಾರ್ಯದರ್ಶಿ ಧನಂಜಯ ಪಂಡಿತ್,
ಕಾರ್ಯಕ್ರಮದ ಸಂಚಾಲಕರು ಗಳಾದ ಜ್ಞಾನೇಶ್ವರ ಶೇಟ್,
ಶ್ರೀನಿವಾಸ ರಾವ್, ಎಂ.ದಿವಾಕರ ತಿನ್ಸನ್‌ (ಸೇರ್ಕಜೆ) ರಾಕೇಶ್ ಕುಂಟಿಕಾನ, ರಾಮಕೃಷ್ಣ ಆಲಂಕಯ್ಯ,ಗೌತಂ ಭಟ್, ಶಿವನಾಥ ರಾವ್,ಸಚಿನ್ ರಾವ್ ಹಾಗೂ ಉತ್ಸವ ಸಮಿತಿ ಪದಾಧಿಕಾರಿಗಳಾದ ಕಿಶನ್‌ಕುಮಾರ್, ಯತಿನ್ ರಾವ್, ವಿಜಯಕುಮಾರ್ ಎ.ಕಮಲಾಕ್ಷ ಆಚಾರ್ಯ, ಗೌತಮ್ ಸೇರ್ಕಜೆ, ನವೀನ್ ರಾವ್, ಬಿ.ವಿ.ರಾಧಾಕೃಷ್ಣ ರಾವ್,ದಿನೇಶ್ ಬೆಟ್ಟಂಪಾಡಿ, ಜನಾರ್ಧನ ಬೆಟ್ಟಂಪಾಡಿ, ಭುವನೇಂದ್ರ ಶೇಟ್, ಶಿವಕುಮಾರ್ ಬೆಟ್ಟಂಪಾಡಿ,ಗಣೇಶ್ ಬೆಟ್ಟಂಪಾಡಿ,ಸುನಿಲ್ ಮಾಣಿಬೆಟ್ಟು,ಶಶಿಧರ ಕಜೆ, ವಸಂತ ಬೆಟ್ಟಂಪಾಡಿ ಹಾಗೂ ಹಳೆಗೇಟು ಶಿವಾಜಿ ಯುವ ವೃಂದದ ಪದಾಧಿಕಾರಿಗಳು, ಸದಸ್ಯರು, ಹಾಗೂ ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು.