ನಿರ್ದೇಶಕರು ಹಾಗೂ ನಾಯಕ ನಟ ಅಲೋಕ್ ಎ. ಕೆ. ಯವರಿಂದ ಸುಳ್ಯದಲ್ಲಿ ಪತ್ರಿಕಾಗೋಷ್ಠಿ
ಕೃತರ್ಥ ಪ್ರೊಡಕ್ಷನ್ ನಿರ್ಮಾಣದ ನೂತನ ಕನ್ನಡ ಚಲನ ಚಿತ್ರ ‘ಕುಡ್ಲ ನಮ್ದು ಊರು’ ಸೆ 5 ರಂದು ರಾಜ್ಯದ್ಯಂತ ಬಿಡುಗಡೆ ಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕರು ಹಾಗೂ ನಾಯಕನಟ ದುರ್ಗಾ ಪ್ರಸಾದ್ ಅರ್ ಕೆ (ಅಲೋಕ್ ಎ ಕೆ) ಆ 30 ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಮಾತನಾಡಿದ ಅವರು ಮೊದಲ ಹಂತದಲ್ಲಿ ರಾಜ್ಯದ 70 ಥಿಯೇಟರ್ ಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದ್ದು ಚಿತ್ರದ ಪ್ರೇಮಿಯರ್ ಶೋ ಈಗಾಗಲೇ ಎರಡು ಕಡೆ ನಡೆದಿದೆ. ಇದನ್ನು ನೋಡಿದ ಪ್ರೇಕ್ಷಕ ಜನರ ಪ್ರತಿಕ್ರಿಯೆ ಉತ್ತಮವಾಗಿದ್ದು ಜನರ ಪ್ರತಿಕ್ರಿಯೆ ಕಂಡು ಈ ಚಿತ್ರ ಯಶಸ್ವಿಗೊಳ್ಳುವ ಬಗ್ಗೆ ನಮಗೆ ಭರವಸೆ ಬಂದಿದೆ ಎಂದು ಹೇಳಿದರು.
ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲು ಮೂಡಿಸಿದೆ ಎಂಬುದು ಪ್ರೇಕ್ಷಕರ ಅಭಿಪ್ರಾಯಗಳಿಂದ ತಿಳಿದುಬರುತಿದೆ.















ಚಿತ್ರದಲ್ಲಿ ಮನುಷ್ಯನ ಜೀವನದ ಮೂರು ಹಂತಗಳು ಹಾಗೂ ಪರಶುರಾಮ ಸೃಷ್ಟಿಯ ತುಳುನಾಡಿನ ಬಗ್ಗೆ,
ಈ ಹಾದಿಯಲ್ಲಿ ಏನೆಲ್ಲಾ ಸವಾಲುಗಳು ಬರುತ್ತದೆ ಎಂಬುದನ್ನು ಚಿತ್ರದಲ್ಲಿ ವಿಭಿನ್ನ ರೀತಿಯಲ್ಲಿ ತೋರಿಸುವ ಪ್ರಯತ್ನವನ್ನು ಮಾಡಲಾಗಿದೆ ಎಂದು ಚಿತ್ರದ ಬಗ್ಗೆ ವಿವರಿಸಿದರು.

ಚಿತ್ರದಲ್ಲಿ ಸಾಕಷ್ಟು ಟ್ವಿಸ್ಟ್ ಗಳಿದ್ದು ಪ್ರೇಕ್ಷಕರಿಗೆ ಕೊನೆಯವರೆಗೂ ಕುತೂಹಲವನ್ನಿರಿಸಿಕೊಂಡು ಮುಂದುವರಿಯುತ್ತದೆ.
ಚಿತ್ರವನ್ನು ಕೃತರ್ಥ ಪ್ರೊಡಕ್ಷನ್ ನಿರ್ಮಿಸಿದ್ದು
ಅಂಕಿತ ಪದ್ಮ,ಚಿತ್ರ ಗೌಡ,ನರೇಂದ್ರ ಜೈನ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.
ನಾಯಕ ನಟರುಗಳಾಗಿ ಅಲೋಕ್ ಎ ಕೆ,ಸ್ವರಾಜ್ ಶೆಟ್ಟಿ,ಲಂಚು ಲಾಲ್ ಕೆ ಎಸ್ ನಟಿಸಿದ್ದೇವೆ.ನಾಯಕ ನಟಿಯರುಗಳಾಗಿ ಅನಿಕಾ ಶೆಟ್ಟಿ, ಶ್ರೇಯಾ ಶೆಟ್ಟಿ, ನಯನ ಸಾಲಿಯನ್, ಅಭಿನಯಿಸಿದ್ದು,ತಾರಾಗಣದಲ್ಲಿ ಪ್ರಕಾಶ್ ತುಮಿ ನಾಡು, ದಿಲೀಪ್ ಕಾರ್ಕಳ, ಪ್ರಜ್ವಲ್ ಪ್ರಶಾಂತ್, ಮಂಜು ಸುವರ್ಣ, ಮತ್ತಿತರು ಇದ್ದಾರೆ.ನಿರ್ದೇಶನ ದುರ್ಗಾ ಪ್ರಸಾದ್ ಆರ್ ಕೆ (ಅಲೋಕ್),ನಿರ್ವಹಿಸಿದ್ದು
ಕ್ಯಾಮೆರಾ ಮ್ಯಾನ್ ಮಯೂರ್ ಶೆಟ್ಟಿ,ನಿಶ್ಚಿತ್ ಪೂಜಾರಿ ಸಂಕಲನ ಮಾಡಿದ್ದಾರೆ.
ನಿತಿನ್ ಶಿವರಾಂ ರವರ ಸಂಗೀತ ನಿರ್ದೇಶನದಲ್ಲಿ ಹಾಡುಗಳು ತುಂಬಾ ಚೆನ್ನಾಗಿ ಮೂಡಿ ಬಂದಿದ್ದು ಚಿತ್ರದ ಹಿನ್ನೆಲೆ ಸಂಗೀತವು ಶ್ರೀ ಸಸ್ತಾ ಹಾಗೂ ಅಂಜನ್ ಪೂಜಾರಿ ರವರು ಅದ್ಭುತವಾಗಿ ನಿರ್ಮಿಸಿದ್ದಾರೆ.
ಚಿತ್ರದ ಹಾಡುಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಶನ್ ಮೂಡಿಸಿದೆ. ಈ ಚಿತ್ರ ದ ಯಶಸ್ವಿಗೆ ಪ್ರೇಕ್ಷಕರ ಸಹಕಾರ ಬೇಕಾಗಿದ್ದು ಸಾರ್ವಜನಿಕರು ಕುಟುಂಬ ಸಮೇತವಾಗಿ ಚಿತ್ರವನ್ನು ವೀಕ್ಷಿಸಿ ನಮಗೆ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿಕೊಂಡರು.
ಈ ಸಂಧರ್ಭದಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ ಗೊಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಸಹಾಯಕರು ಕದ್ರಿ ಈವೆಂಟ್ಸ್ ಮಾಲಕರಾದ ಜಗದೀಶ್ ಕದ್ರಿ, ಸಹಾಯಕ ನಿರ್ದೇಶಕ ಯತೀಶ್ ಕದ್ರ ಉಪಸ್ಥಿತರಿದ್ದರು.










