ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸಭೆ

0

ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯು ಆ.30 ರಂದು ನಡೆಯಿತು.


ಠಾಣಾ ಎಸ್.ಐ.ಈರಯ್ಯ ರವರು ಸ್ವಾಗತಿಸಿ,ಮುಂಬರುವ ಈದ್ ಮಿಲಾದ್ ಹಬ್ಬಗಳನ್ನು ಇಲಾಖಾ ನಿಯಮಗಳನ್ನು ಪಾಲಿಸಿಕೊಂಡು ಆಚರಿಸಬೇಕು.
ಸಾರ್ವಜನಿಕ‌ರಿಗೆ ತೊಂದರೆಯಾಗದಂತೆ ರಸ್ತೆಯಲ್ಲಿ ಮೆರವಣಿಗೆ ಮಾಡುವಂತೆ ಹೇಳಿದರು.ರಾತ್ರಿ ನಿಗದಿಪಡಿಸಿದ ಸಮಯದ ಒಳಗೆ ಕಾರ್ಯಕ್ರಮ ಮುಗಿಸುವಂತೆ ಮತ್ತು ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.


ಸಭೆಯಲ್ಲಿ ಬೆಳ್ಳಾರೆ ಠಾಣೆ ವ್ಯಾಪ್ತಿಯ ಎಲ್ಲಾ ಮಸೀದಿಗಳ ಮುಖಂಡರು ,ಪದಾಧಿಕಾರಿಗಳು ಉಪಸ್ಥಿತರಿದ್ದರು.