ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘಕ್ಕೆ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ

0

ಮಂಗಳೂರಿನಲ್ಲಿ ನಡೆದ ಡಿಸಿಸಿ ಬ್ಯಾಂಕಿನ ಮಹಾಸಭೆಯಲ್ಲಿ ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘಕ್ಕೆ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ ಲಭಿಸಿದೆ.

ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಲ್ಲಿ ವಿಶಿಷ್ಟ ರೀತಿಯ ಜೇನು ಸಾಕಾಣೆ, ಜೇನು ಕೃಷಿ ಹಾಗೂ ಆಧುನಿಕ ತಂತ್ರಜ್ಞಾನದೊಂದಿಗೆ ಸಹಕಾರಿ ಸಂಘವು ಉತ್ತಮವಾದ ಘಟಕವನ್ನು ಹೊಂದಿದ್ದು, ಜೇನು ಕೃಷಿಕರಿಂದಲೇ ಪಡೆಯುವ ಜೇನಿನಿಂದ ಹನಿಬೈಟ್ ಜೇನು ಚಾಕಲೇಟ್ ಹಾಗೂ ಪೆಪ್ಪರ್ ಚಾಕಲೇಟ್ ತಯಾರು ಮಾಡುತ್ತಿದ್ದು, ಇದನ್ನೆಲ್ಲಾ ಪರಿಗಣಿಸಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಬ್ಯಾಂಕ್ ವಿಶಿಷ್ಟ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಹಕಾರಿ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ಪ್ರಶಸ್ತಿ ಹಸ್ತಾಂತರಿಸಿದರು.

ಸಂಘದ ಅಧ್ಯಕ್ಷ ಸಹಕಾರಿ ರತ್ನ ಚಂದ್ರ ಕೋಲ್ಚಾರ್, ಕಾರ್ಯನಿರ್ವಾಹಣಾಧಿಕಾರಿ ತಿಮ್ಮಯ್ಯ ಪಿಂಡಿಮನೆ, ನಿರ್ದೇಶಕರಾದ ಪುರುಷೋತ್ತಮ ಭಟ್, ತನಿಯಪ್ಪ ಗೌಡ, ಸಹಾಯಕ ಮಾರಾಟ ಮತ್ತು ಖರೀದಿ ಅಧಿಕಾರಿ ಜಯಾನಂದ ಜೆ ಇವರುಗಳು ಪ್ರಶಸ್ತಿಯನ್ನು ಸ್ವೀಕರಿಸಿದರು‌.