ಕಲ್ಲುಗುಂಡಿ ಶ್ರೀ ಗಣೇಶೋತ್ಸವ ಸಮಿತಿ ಅದ್ಧೂರಿಯಿಂದ ನಡೆದ 37 ನೇ ವರ್ಷದ ಶ್ರೀ ಗಣೇಶೋತ್ಸವ ಹಾಗೂ ವೈಭವದ ಶೋಭಾಯಾತ್ರೆ

0

ಬ್ಯಾಂಡ್ ಸೆಟ್ ಗೆ ಹೆಜ್ಜೆ ಹಾಕಿದ ಭಕ್ತಾಧಿಗಳು : ಕೂಲಿಶೆಡ್ಡ್ ನಲ್ಲಿ ಜಲಸ್ತಂಭನ

ಕಲ್ಲುಗುಂಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 37 ನೇ ವರ್ಷದ ಗಣೇಶೋತ್ಸವವು ಕಲ್ಲುಗುಂಡಿ ಶ್ರೀ ರಾಮ ಕೃಷ್ಣ ಭಜನಾ ಮಂದಿರರದ ವಠಾರದಲ್ಲಿ 27 ರಿಂದ 29 ರ ತನಕ ನಡೆಯಿತು.

ಆ.27 ರಂದು ರಾಮಕೃಷ್ಣ ಭಜನಾ ಮಂದಿರ ವಠಾರದಲ್ಲಿ ಗಣಪತಿ ಹೋಮ , ಕಲ್ಲುಗುಂಡಿ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಿಂದ ಶ್ರೀ ದೇವರ ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದಲ್ಲಿ ಪೂಜಿಸಿ ಶ್ರೀ ರಾಮಕೃಷ್ಣ ಭಜನಾ ಮಂದಿರ ವಠಾರದಲ್ಲಿ ಪ್ರತಿಷ್ಠಾಪನೆ , ಬಳಿಕ ವಿವಿಧ ಆಟೋಟ ಸ್ಪರ್ಧೆಗಳು , ಮಹಾಪೂಜೆ , ಸಾರ್ವಜನಿಕ ಅನ್ನ ಸಂತರ್ಪಣೆ, ಮಧ್ಯಾಹ್ನ ಬಳಿಕ ಸಾಹಿತ್ಯ ಸ್ಪರ್ಧೆ ” ಭಕ್ತಿ ಗೀತೆ” ಸಂಜೆ ಶ್ರೀ ದುರ್ಗಾ ಭಜನಾ ಮಂಡಳಿ ಕಣ್ಣಾಜೆ ಬೆಳ್ತಂಗಡಿ ಅವರಿಂದ ಕುಣಿತ ಭಜನೆ , ಬಹುಮಾನ ವಿತರಣೆ , ಸಾರ್ವಜನಿಕ ಅನ್ನ ಸಂತರ್ಪಣೆ ಬಳಿಕ ಶ್ರೀಮತಿ ವಿದುಷಿ ಇಂದುಮತಿ ನಾಗೇಶ್ ನಟರಾಜ ನೃತ್ಯ ಕಲಾನಿಕೇತನ ಕಲ್ಲುಗುಂಡಿ ವಿದ್ಯಾರ್ಥಿಗಳಿಂದ ನಿತ್ಯೋಪಾಸನ ಕಾರ್ಯಕ್ರಮ ನಡೆಯಿತು. ಆ.28 ರಂದು ಬೆಳಿಗ್ಗೆ ಸಾರ್ವಜನಿಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು , ಮಧ್ಯಾಹ್ನ ಮಹಾಪೂಜೆ , ಅನ್ನ ಸಂತರ್ಪಣೆ , ಸಂಜೆ ಭಜನೆ ಬಳಿಕ ರಾತ್ರಿ ನಾಟ್ಯ ಗುರು ರಾಧಾಕೃಷ್ಣ ಇವರ ಶಿಷ್ಯ ವೃಂದದಿಂದ ನರಕಾಸುರ ಮೋಕ್ಷ ಜಂಭಾವತ ಕಲ್ಯಾಣ , ರಾತ್ರಿ 9 ರಿಂದ ಮಹಾಪೂಜೆ, ಅನ್ನಸಂತರ್ಪಣೆ , ಬಳಿಕ ಜೀವನ್ ಬೆಳ್ಳಾರೆ ನಿರ್ದೇಶನದ ಡ್ಯಾನ್ಸ್ & ಬೀಟ್ಸ್ ಕಲಾ ಕೇಂದ್ರ ಬೆಳ್ಳಾರೆ , ಪಂಜ ಕೈಕಂಬ , ಸುಬ್ರಹ್ಮಣ್ಯ ವಿದ್ಯಾರ್ಥಿಗಳಿಂದ ನೃತ್ಯ ಸಂಭ್ರಮ ನಡೆಯಿತು. ಆ.29 ರಂದು ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದು ಮಧ್ಯಾಹ್ನ 3 ಗಂಟೆಯಿಂದ ಪುಷ್ಪಾಪಾಲಂಕೃತ ಭವ್ಯ ರಥದಲ್ಲಿ ಗಣೇಶನ ಮೂರ್ತಿಯನ್ನು ಕುಳ್ಳಿರಿಸಿದ್ದು , ರೆಡ್ ಸ್ಟೋನ್ ಕಲ್ಲುಗುಂಡಿ & ಪಿಡಬ್ಲ್ಯೂಡಿ ಕಂಟ್ರಾಕ್ಟರ್ ವಿ.ವಿ ಬಾಲನ್ ದೀಪ ಬೆಳಗಿಸಿ ಕಲ್ಲುಗುಂಡಿ ರಾಮಕೃಷ್ಣ ವಠಾರದಿಂದ ಹೂವಿನಿಂದ ಸಿಂಗರಿಸಿದ ಭವ್ಯ ರಥದೊಂದಿಗೆ ಬ್ಯಾಂಡ್ ಸೆಟ್ , ವಾದ್ಯ ಘೋಷಗಳೊಂದಿಗೆ ನೂರಾರು ಭಕ್ತರೊಂದಿಗೆ ಕಲ್ಲುಗುಂಡಿ ಮುಖ್ಯ ಪೇಟೆಯಾಗಿ ಸಾಗಿಬಂದು ದೇವರ ಮೂರ್ತಿಯ ಶೋಭಾಯಾತೆಯು ಕೂಲಿಶೆಡ್ಡ್ ನ ಬಳಿಯ ಪಯಸ್ವಿನಿ ನದಿಯಲ್ಲಿ ಜಲಸ್ತಂಭನ ಮಾಡಲಾಯಿತು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಯಶವಂತ ಎಂ. ಸಿ , ಅಧ್ಯಕ್ಷ ಶೀನಪ್ಪ ಕೈಪಡ್ಕ , ಕಾರ್ಯದರ್ಶಿ ರೇಖಾನಾಥ್ ಎಕ್ಕಡ್ಕ, ಖಜಂಜಿ ವಿನಯ ದುಗ್ಗಳ , ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರು , ಊರ ಪರವೂರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಉಪಸ್ಥಿತರಿದ್ದು, ಶ್ರೀ ದೇವರ ಕೃಪೆಗೆ ಪಾತ್ರರಾದರು.