ಸುಳ್ಯ ತಾ. ಮಟ್ಟದ ಅತ್ಯುತ್ತಮ ಯುವಕ – ಯುವತಿ ಮಂಡಲ ಪ್ರಶಸ್ತಿಗೆ ಅರ್ಜಿ ಆಹ್ವಾನ

0

ಸುಳ್ಯ ಯುವಜನ ಸಂಯುಕ್ತ ಮಂಡಳಿ ವತಿಯಿಂದ ತಾಲೂಕಿನಲ್ಲಿ ಅತ್ಯುತ್ತಮ ಕೆಲಸ ಕಾರ್ಯ ಮಾಡಿದ ಯುವಕ – ಯುವತಿ ಮಂಡಲಗಳಿಗೆ ಕೊಡ ಮಾಡುವ ಅತ್ಯುತ್ತಮ ಯುವಕ – ಯುವತಿ ಮಂಡಲ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

2024 ಆಗಸ್ಟ್ ನಿಂದ 2025 ರ ಆಗಸ್ಟ್ 31ರ ವರೆಗೆ ತಾವು ಮಾಡಿದ ಚಟುವಟಿಕೆಗಳ ವಿವರಗಳನ್ನು, ದಾಖಲೆಗಳ ಸಹಿತವಾಗಿ ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷರಿಗೆ ಅಥವಾ ತಮ್ಮ ಗ್ರಾಮದ ಉಸ್ತುವಾರಿ ನಿರ್ದೇಶಕರಿಗೆ ಸಲ್ಲಿಸಬಹುದು.‌ ಅರ್ಜಿ ಸಲ್ಲಿಸಲು ಸೆ.10 ಕೊನೆಯ ದಿನಾಂಕ. ಆಯ್ಕೆಯಾದ ಯುವಕ, ಯುವತಿ ಮಂಡಲಗಳಿಗೆ ಸೆ.20ರಂದು‌ ನಡೆಯುವ ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ವಿಜಯಕುಮಾರ್ ಉಬರಡ್ಕ ತಿಳಿಸಿದ್ದಾರೆ.