ಸುಳ್ಯದ ಉದ್ಯಮಿ ಲತೀಫ್ ಹರ್ಲಡ್ಕ ಭಾಗಿ, ಸನ್ಮಾನ ಸ್ವೀಕಾರ
ಕರ್ನಾಟಕ ಕಲ್ಚರಲ್ ಫೌಂಡೇಶನ್ ಬಹರೈನ್ ಇದರ ವತಿಯಿಂದ ಬಹರೈನ್ ನ ಮನಾಮ ಕನ್ನಡ ಭವನದಲ್ಲಿ ಅ.29 ರಂದು ಅಂತರಾಷ್ಟ್ರೀಯ ಮಿಲಾದ್ ಸಮ್ಮೇಳನ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸುಳ್ಯ ಅನ್ಸಾರಿಯಾ ಎಜುಕೇಶನ್ ಸೆಂಟರ್ ಇದರ ಪ್ರಧಾನ ಕಾರ್ಯದರ್ಶಿ ಹಾಗೂ ಎಲಿಮಲೆ ನುಸ್ರತ್ ಇಸ್ಲಾಂ ಅಸೋಸಿಯೇಶನ್ ಇದರ ಅಧ್ಯಕ್ಷ ಸಾಮಾಜಿಕ ಧುರಿಣ ಅಬ್ದುಲ್ ಲತೀಫ್ ಹರ್ಲಡ್ಕರವರು ಅತಿಥಿಯಾಗಿ ಭಾಗವಹಿಸಿದ್ದರು.
















ಸುಳ್ಯದಲ್ಲಿ ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿ ಕ್ಕೊಂಡಿರುವ ಲತೀಫ್ ರವರು ದಾನಿಗಳು ಹಾಗಿದ್ದು ಸಮಾಜದಲ್ಲಿನ ಅವರ ಸೇವೆಗೆ ಮನ್ನಣೆ ನೀಡಿ ಕೆ ಸಿ ಎಫ್ ಬಹರೈನ್ ಸಂಘಟನೆ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡಿ ಗೌರವಿಸಿ ಸನ್ಮಾನ ನೀಡಿದೆ.
ವೇದಿಕೆಯಲ್ಲಿ ಕರ್ನಾಟಕದಿಂದ ಸಯ್ಯದ್ ಅಬುಲ್ ರಹಿಮಾನ್ ಬಾಅಲವಿ ತಂಙಳ್ ಹಾಗೂ ರಾಜಕೀಯ ಮತ್ತು ಸಾಮಾಜಿಕ ಮುಖಂಡ ಇನಾಯತ್ ಆಲಿ ಮುಲ್ಕಿ, ಹಾಗೂ ಮುಖಂಡರುಗಳಾದ ಡಾ. ಹಸ್ಸನ್ ಕಾಮಾಲ್, ಐ ಸಿ ಎಫ್ ಅಧ್ಯಕ್ಷ ಅಬೂಬಕ್ಕರ್ ಲತೀಫಿ,ಕೆ ಸಿ ಎಫ್ ಬಹರೈನ್ ಅಧ್ಯಕ್ಷ ಜಮಾಲುದ್ದಿನ್ ವಿಟ್ಲ,ಕಾರ್ಯದರ್ಶಿ ಹಾರಿಸ್ ಸಂಪ್ಯ,ಸ್ವಾಗತ ಸಮಿತಿ ಚೆರ್ಮೆನ್ ಮಜೀದ್ ಜೋಹರಿ,ಮೊದಲಾದವರು ಉಪಸ್ಥಿತರಿದ್ದರು.










