














ಜಾಲ್ಸೂರು ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಶ್ರೀಮತಿ ಶೈಲಜಾ ಪ್ರಕಾಶ್ ಎಂಬವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಪುತ್ತೂರು ತಾಲೂಕಿನ ಪಾಣಾಜೆಯವರಾದ ಶೈಲಜಾರವರು ಪುತ್ತೂರು ಬೆಟ್ಟಂಪಾಡಿ ಪಿಡಿಒ ಆಗಿ ಆರಂಭದಲ್ಲಿ ಸೇವೆ ಸಲ್ಲಿಸಿ, ಆ ಬಳಿಕ ಆರ್ಯಾಪು ಗ್ರಾ.ಪಂ. ನಲ್ಲಿ ಸೇವೆ ಸಲ್ಲಿಸಿದರು. ಕಳೆದ ೫ ವರ್ಷಗಳಿಂದ ಪುತ್ತೂರು ತಾಲೂಕು ಪಂಚಾಯತ್‌ನಲ್ಲಿ ಪ್ರಭಾರ ಸಹಾಯಕ ನಿರ್ದೇಶಕರಾಗಿ ಕರ್ತವ್ಯದಲ್ಲಿದ್ದರು. ಇದೀಗ ಅವರು ಜಾಲ್ಸೂರು ಗ್ರಾ.ಪಂ. ಪಿ.ಡಿ.ಒ. ಆಗಿ ನಿಯೋಜನೆಯಲ್ಲಿ ಬಂದಿದ್ದಾರೆ. ಇವರು ಪಾಣಾಜೆ ನಿವಾಸಿ, ಕೆ.ಎಂ.ಎಫ್ ನಿರ್ದೇಶಕರಾಗಿದ್ದ ನಾರಾಯಣ ಪ್ರಕಾಶ್ ರವರ ಪತ್ನಿ.










