ಅಂಬಟೆಡ್ಕದಲ್ಲಿ ಶ್ರೀ ಆಟೋಮೊಬೈಲ್ ಸ್ಪೇರ್ಸ್ ಸಂಸ್ಥೆ ಶುಭಾರಂಭ

0

ಪದ್ಮಶ್ರೀ ಗಿರೀಶ್ ಭಾರದ್ವಾಜರಿಂದ ಉದ್ಘಾಟನೆ ಮತ್ತು ಶುಭಹಾರೈಕೆ

ಸುಳ್ಯದ ಅಂಬಟಡ್ಕ ಕೆ ವಿ ಜಿ ಆಯುರ್ವೇದಿಕ್ ಆಸ್ಪತ್ರೆ ಬಳಿ ಆ 31 ರಂದು ಶ್ರೀಮತಿ ಮೀನಾಕ್ಷಿ,ಅನುರಾಧ ಎಚ್ ಎನ್ ಹಾಗೂ ಎಚ್ ಕೆ ನಾಗರಾಜ್ ರವರ ಮಾಲಕತ್ವದ ಶ್ರೀ ಆಟೋಮೊಬೈಲ್ ಸ್ಪೇರ್ಸ್ ಸಂಸ್ಥೆ ಶುಭಾರಂಭ ಗೊಂಡಿತು.

ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ ರವರು ನೂತನ ಸಂಸ್ಥೆಯನ್ನು ಉದ್ಘಾಟಿಸಿ ಶುಭಾರೈಸಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ನಗರ ಪಂಚಾಯತ್ ಸದಸ್ಯರು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಕಿಶೋರಿ ಶೇಟ್ ರವರು ವಹಿಸಿದ್ದರು.
ಅತಿಥಿಗಳಾಗಿ ನ ಪಂ ಸದಸ್ಯರಾದ ಎಂ ವೆಂಕಪ್ಪ ಗೌಡ,ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಡಿ ಎಸ್ ಗಿರೀಶ್,
ಗಣ್ಯರುಗಳಾದ ಶ್ಯಾಂಪ್ರಸಾದ್ ಎ. ಡಿ,ಡಿ. ಎಂ. ಸುಮಿತ್ರ ಇಂಜಿನಿಯರ್, ಉಮೇಶ ಪಿ. ಕೆ.,ಜನಾರ್ದನ ದೋಳ,
ಸಂದೀಪ್ ಅರ್ ಅರ್ ಮೋಟರ್ಸ್,ವಿಶ್ವನಾಥ ನೆಲ್ಲಿಬಂಗಾರಡ್ಕ,
ಕಟ್ಟಡ ಮಾಲಕ ಜಬ್ಬಾರ್ ಸಾಹೇಬ್,ಇಂಜಿನಿಯರ್ ವಿಜಯ ಕುಮಾರ್,ಮೊದಲಾದವರು ಉಪಸ್ಥಿತರಿದ್ದರು.

ಹಿರಿಯರಾದ ಶ್ರೀಮತಿ ಅಮ್ಮಣ್ಣಿಮ್ಮರವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸಂಸ್ಥೆಯ ಮಾಲಾಕರುಗಳಾದ ಮೀನಾಕ್ಷಿ, ಶ್ರೀಮತಿ ಅನುರಾಧ ಎಚ್.ಎನ್.ಹೆಚ್. ಕೆ. ನಾಗರಾಜ್, ಹಾಗೂ ಪುತ್ರರಾದ ಕೃಷ್ಣ ಮೂರ್ತಿ, ವೇಣು ಪ್ರಸಾದ್, ಚೈತನ್ಯ, ವರುಣ್ ಸಹಕರಿಸಿದರು. ಪತ್ರಕರ್ತ ಹಸೈನಾರ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಈ ಸಂಸ್ಥೆಯಲ್ಲಿ ಎಲ್ಲಾ ತರಹದ ಕಾರುಗಳ ಸ್ಪೇರ್ ಪಾರ್ಟ್ಸ್ ಲಭ್ಯವಿರುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.