ಜೂನಿಯರ್ ಕಾಲೇಜು ರಸ್ತೆ ಬಳಿ ಹೋಟೆಲ್ ಲಕ್ಷೀನಾರಾಯಣ ನವೀಕೃತಗೊಂಡು ಶುಭಾರಂಭ

0

ಸುಳ್ಯ ಜೂನಿಯರ್ ಕಾಲೇಜು ರಸ್ತೆ ಯುವಜನ ಸಂಯುಕ್ತ ಮಂಡಳಿ ಮುಂಭಾಗ ಸುಮಾರು 50 ದಶಕಗಳ ಇತಿಹಾಸ ಹೊಂದಿರುವ ಹೋಟೆಲ್ ಲಕ್ಷ್ಮೀನಾರಾಯಣ ನವೀಕೃತಗೊಂಡು ಆ 31 ರಂದು ಶುಭಾರಂಭ ಗೊಂಡಿತು.

ನೂತನ ಸಂಸ್ಥೆಯ ಉದ್ಘಾಟನೆಯು ಅರ್ಚಕರಾದ ಜನಾರ್ಧನ್ ಭಟ್ ದೋಣಿ ಮೂಲೆ ಹಾಗೂ ದಯಾನಂದ ಭಟ್ ರವರ ಪೂಜಾ ಕಾರ್ಯಕ್ರಮ ದೊಂದಿಗೆ ನಡೆಯಿತು.

ಈ ಸಂಧರ್ಭದಲ್ಲಿ ಮಾಲಕರುಗಳಾದ ಚಂದ್ರಶೇಖರ್ ನಾಯಕ್,ಶ್ರೀಮತಿ ಚಂದ್ರಕಲಾ, ಸತೀಶ್ ನಾಯಕ್,ಮಧು ಲತಾ, ಸಂತೋಷ್, ಉಷಾ, ಧನಂಜಯ ನಾಯಕ್,ಶ್ರೀಮತಿ ಧನ್ಯ, ರಾಹುಲ್, ರಶ್ಮಿ, ವಾಸುದೇವ್ ನಾಯಕ್, ಜಗದೀಶ್, ಶ್ರೀಮತಿ ಸವಿತಾ, ಅಂಜಲಿ, ಇಂಜಿನಿಯರ್ ವಿಜಯ ಕುಮಾರ್, ಹಾಗೂ ಕುಟುಂಬದ ಸದಸ್ಯರು,ಮಿತ್ರ ಬಳಗದ ವರು, ಸ್ಥಳೀಯರು ಉಪಸ್ಥಿತರಿದ್ದರು.

ನಮ್ಮಲ್ಲಿ ಎಲ್ಲಾ ತರಹದ ಸಸ್ಯಾಹಾರಿ ಖಾದ್ಯಗಳು, ಟಿಫಿನ್,ಲಘು ಉಪಹಾರಗಳು ಲಭ್ಯವಿರುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.