ಸಾವಿರಕ್ಕೂ ಕ್ರೀಡಾಪಟುಗಳು ಭಾಗಿ
ಹಿರಿಯರಿಗೂ ಕ್ರೀಡಾಕೂಟಗಳಾಗಬೇಕು:ಶಾಸಕಿ ಭಾಗೀರಥಿ ಮುರುಳ್ಯ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ದೇವಚಳ್ಳ, ಯುವಜನ ಸಂಯುಕ್ತ ಮಂಡಳಿ ಸುಳ್ಯ, ದೇವಚಳ್ಳ ಯುವಕ ಮಂಡಲ ಕಂದ್ರಪ್ಪಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ದಸರಾ- ಕ್ರೀಡಾಕೂಟವು ಆ.31 ರಂದು ಕಂದ್ರಪ್ಪಾಡಿ ಸ.ಹಿ.ಪ್ರಾ ಶಾಲೆಯ ಕ್ರೀಡಾಂಗಣದಲ್ಲಿ ನಡೆಯಿತು.

ಸುಳ್ಯವಿಧಾನ ಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ದಸರಾ ಕ್ರೀಡಾಕೂಟದಲ್ಲಿ ಯುವಕ, ಯುವತಿಯರು ಕಡಿಮೆ ಭಾಗವಹಿಸುತಿದ್ದಾರೆ. ಶಾಲಾ ಮಕ್ಕಳು ಅಭ್ಯಾಸ ಮಾಡಿ ಬಂದು ಭಾಗವಹಿಸುತ್ತಾರೆ ಎಂಬ ಅಳುಕಿನ ಭಾವನೆಯಿಂದ ಹೀಗಾಗುತ್ತಿದೆ. ಹಿರಿಯರಿಗೂ ಬೇರೆಯೇ ಕ್ರೀಡಾಕೂಟಗಳು ಆಗಬೇಕು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಕ್ರೀಡೆಯೊಂದಿಗೆ ಉತ್ತಮ ಶಿಕ್ಷಣ ಪಡೆಯುವಂತಾಗಲಿ ಎಂದು ಆಶಿಸಿದರು.
















ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರ ದ.ಕ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ ಕ್ರೀಡಾಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಅವರು ಜಾತಿ ಧರ್ಮವನ್ನು ಒಟ್ಟುಗೂಡಿಸುವ ಕೆಲಸ ಇದ್ದರೆ ಅದು ಕ್ರೀಡೆ, ದ.ಕ ಜಿಲ್ಲೆಯಲ್ಲಿ ಹೆಚ್ಚು ಸಾಮರಸ್ಯ ಹೆಚ್ಚು ಯಾಕೆಂದರೆ ಇಲ್ಲಿ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆ ಹೆಚ್ಚು ನಡೆಯುತ್ತಿರುತ್ತದೆ ಎಂದರು.
ದೇವಚಳ್ಳ ಗ್ರಾ.ಪಂ ಸದಸ್ಯ ಭವಾನಿಶಂಕರ, ದೇವಚಳ್ಳ ಗ್ರಾ.ಪಂ ಮಾಜಿ ಅಧ್ಯಕ್ಷ ದಿವಾಕರ ಮುಂಡೋಡಿ, ಮಡಪ್ಪಾಡಿ ಪಿ.ಎ.ಸಿ ಬ್ಯಾಂಕ್ ಅಧ್ಯಕ್ಷ ವಿನಯ ಮುಳುಗಾಡು, ನಿವೃತ್ತ ದೈಹಿಕ ಶಿಕ್ಷಕ ಜಯರಾಮ ಕಡ್ಲಾರು, ಯುವಜನ ಸಂಯುಕ್ತ ಮಂಡಳಿ ಉಸ್ತುವಾರಿ ನಿರ್ದೇಶಕ ವಿಜೇಶ್ ಹಿರಿಯಡ್ಕ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ,
ಯುವ ಸಬಲೀಕರಣ ಕ್ರೀಡಾ ಇಲಾಖೆ ಸುಳ್ಯ ಇದರ ಸಹಾಯಕ ನಿರ್ದೇಶಕ ದೇವರಾಜ್ ಮುತ್ಲಾಜೆ, ದೇವಚಳ್ಳ ಯುವಕ ಮಂಡಳದ ಅಧ್ಯಕ್ಷ ಉದಯಕುಮಾರ್,
ಕಂದ್ರಪ್ಪಾಡಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರೀಮತಿ ವೀಣಾ, ಕಂದ್ರಪ್ಪಾಡಿ ಸ.ಹಿ.ಪ್ರಾ ಶಾಲಾ ಮುಖ್ಯಗುರುಗಳಾದ ಶ್ರೀಮತಿ ವಾಣಿ ಕೆ.ಎಸ್ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ಅಂಚೆ ಪಾಲಕರಾದ ಕಂದ್ರಪ್ಪಾಡಿ ಪರಮಲೆ ಪುರುಷೋತ್ತಮ ಇವರನ್ನು ಯುವಕ ಮಂಡಲದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ದೇವರಾಜ್ ಮುತ್ಲಾಜೆ ಪ್ರಾಸ್ತಾವಿಕ ಮಾತಗಳೊಂದಿಗೆ ಸ್ವಾಗತಿಸಿದರು. ವಿಜೇಶ್ ವಂದಿಸಿದರು. ಓಂ ಪ್ರಕಾಶ್ ಮುಂಡೋಡಿ ಹಾಗೂ ಪುನಿತ್ ರವಿ ಕಾರ್ಯಕ್ರಮ ನಿರೂಪಿಸಿದರು.










