ಭಾರತೀಯ ವಾಯು ರಕ್ಷಾ ಭೂ ಸೇನೆಯ ಸುಬೇದಾರ್ ಮುತ್ತುಮಣಿ ಕೆ. ಸೇವಾ ನಿವೃತ್ತಿ

0

ಭಾರತೀಯ ವಾಯು ರಕ್ಷಾ ಭೂ ಸೇನೆಯ ಯೋಧ ಮುತ್ತುಮಣಿ ಕೆ.ಯವರು ಆ.೩೧ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ.


ಅಮರಮುಡ್ನೂರು ಗ್ರಾಮ ಕೂಟೇಲಿನ ನಿವಾಸಿ ದಿ.ಕಾರ್ತಿಕೇಶನ್ ಮತ್ತು ಕದಿರೇಶಮ್ಮ ದಂಪತಿ ಪುತ್ರ ಸುಬೆದಾರ್ ಮುತ್ತುಮಣಿ ಕೆ ಯವರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಯಿಕುಳಿಯಲ್ಲಿ ಪ್ರಾಥಮಿಕ ಶಿಕ್ಷಣ, , ಪದವಿಪೂರ್ವ ಕಾಲೇಜು ಸಂಪಾಜೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿ, ನೆಹರೂ ಸ್ಮಾರಕ ಮಹಾ ವಿದ್ಯಾಲಯ ಸುಳ್ಯದಲ್ಲಿ ಪಿಯುಸಿ ಮುಗಿಸಿ, ಅಣ್ಣಾಮಲೈ ವಿಶ್ವ ವಿದ್ಯಾಲಯ ದಿಂದ ಪದವಿ ವಿದ್ಯಾಭ್ಯಾಸ ಪೂರ್ತಿಗೊಳಿಸಿದರು.


೧೯೯೫ರ ಆಗಸ್ಟ್‌ರಲ್ಲಿ ಮಂಗಳೂರಿನಲ್ಲಿ ಭಾರತೀಯ ಭೂ ಸೇನೆಗೆ ಆಯ್ಕೆಯಾಗಿ ಮಹಾರಾಷ್ಟ್ರದ ನಾಸಿಕ್ ರೋಡ್ ಕ್ಯಾಂಪ್ ನಲ್ಲಿರುವ ಆರ್ಮಿ ಏರ್ ಡಿಫೆನ್ಸ್ ಗೈಡೆಡ್ ಮಿಸೈಲ್ ಸೆಂಟರ್‌ನಲ್ಲಿ ಸೈನ್ಯದ ತರಬೇತಿಯನ್ನು ಮುಗಿಸಿದರು. ನಂತರ ೨೭ ನೆ ಆರ್ಮಿ ಏರ್ ಡಿಫೆನ್ಸ್ ಮಿಸೈಲ್ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸಿದರು. ಇವರು ಹರಿಯಾಣ ರಾಜ್ಯದ ಅಂಬಾಲದಲ್ಲಿ, ಜಮ್ಮು ಕಾಶ್ಮೀರದಲ್ಲಿ ಶ್ರೀನಗರ, ಪೂಂಚ್ ರಜೌರಿ ಸೆಕ್ಟರ್ ಮೂರು ಭಾರಿ, ಗುಜರಾತ್ ನ ಬರೋಡಾದಲ್ಲಿ , ಪಂಜಾಬ್ ನ ಭಟಿಂಡಾದಲ್ಲಿ ಅಸ್ಸಾಂ ರಾಜ್ಯದ ಗುವಾಹಟಿ, ಮೀಸಮಾರಿ, ಹೀಗೆ ಹಲವಾರು ರಾಜ್ಯಗಳಲ್ಲಿ ಸೇವೆ ಸಲ್ಲಿಸಿದರು. ೧೯೯೯ ರಲ್ಲಿ ಆಪರೇಷನ್ ವಿಜಯ್ ಎನ್ನುವ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದರು. ಪಾರ್ಲಿಮೆಂಟ್ ಧಾಳಿಯ ಆಪರೇಷನ್ ಪರಾಕ್ರಮ ಗುಜರಾತಿನ ಭಾರತ ಪಾಕಿಸ್ತಾನ ಸೀಮಾದಲ್ಲಿ ಭಾಗವಹಿಸಿದ್ದರು.

ಮತ್ತು ಜಮ್ಮು ಕಾಶ್ಮೀರ ದಲ್ಲಿ ೫೧ನೆ ರಾಷ್ಟೀಯ ರೈಫಲ್ ಬೆಟಾಲಿಯನ್ ಮತ್ತು ೫೮ನೆ ರಾಷ್ಟೀಯ ರೈಫಲ್ ಬೆಟಾಲಿಯನ್ ನಲ್ಲಿ ಉಗ್ರಗಾಮಿಗಳ ವಿರುದ್ಧ ಹಲವಾರು ಅಂಬುಷ್ ಆಪರೇಷನ್ ಗಳಲ್ಲಿ ಭಾಗವಹಿಸಿದ್ದರು. ನಂತರ ಅಸ್ಸಾಂ ರಾಜ್ಯದಲ್ಲಿ ಅಬ್ದುಲ್ ಕಲಾಂ ರವರು ಆವಿಷ್ಕಾರ ಮಾಡಿದ ಅಗ್ನಿ ಕ್ಷಿಪಣಿ ಯಲ್ಲಿ ಸೇವೆ ಸಲ್ಲಿಸಿ ಕಮಾಂಡರ್ ಇನ್ ಚೀಫ್, ಸ್ಟ್ರಾಟಜಿಕ್ ಫೋರ್ಸಸ್ ಕಮಾಂಡ್ ನ ಪ್ರಸಂಷತಾ ಪತ್ರ ಪಡೆದಿರುತ್ತಾರೆ. ಹಾಲಿಯಲ್ಲಿ ನಡೆದ ಆಪರೇಷನ್ ಸಿಂಧೂರ ದಲ್ಲಿ ಪಂಜಾಬ್ ರಾಜ್ಯದ ಭಾರತ ಪಾಕಿಸ್ತಾನ ಸೀಮಾ ದಲ್ಲಿ ಆಪರೇಷನಲ್ ಕಮಾಂಡ್ ಪೋಸ್ಟ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಇವರು ೧೯೯೮ರಲ್ಲಿ ಮಹಾರಾಷ್ಟ್ರಾದ ಪುಣೆಯಲ್ಲಿ ಆರ್ಮಿ ಇನ್ಸಟೂಟ್ ಆಫ್ ಪಿಸಿಕಲ್ ಟ್ರೈನಿಂಗ್ ಪುಣೆಯಲ್ಲಿ ಸೈನ್ಯದ ಶಾರೀರಿಕ ತರಬೇತಿ ಶಕ್ಷಕ ಶಿಕ್ಷಣ ಪಡೆದು ಸೈನ್ಯದ ತರಬೇತಿ ಕೇಂದ್ರದಲ್ಲಿ ಶಾರೀರಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ೩೦ ವರುಷ ಭಾರತೀಯ ವಾಯುರಕ್ಷಾ ಭೂ ಸೇನೆಯಲ್ಲಿ ಹಲವಾರು ಪದವಿ ಗಳನ್ನು ಪಡೆದು ಈಗ ಸುಬೇದಾರ್ ಪದವಿಯಲ್ಲಿ ೨೭ ಆರ್ಮಿ ಏರ್ ಡಿಫೆನ್ಸ್ ಮಿಸೈಲ್ ರೆಜಿಮೆಂಟ್ ನಿಂದ ೨೦೨೫ ಆಗಸ್ಟ್ ೩೧ ರಂದು ನಿವೃತ್ತರಾಗಿದ್ದಾರೆ. ಪತ್ನಿ ಗೌರಿ ಶಂಕರಿ , ತಿರುಚಿರಾಪಳ್ಳಿಯಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿದ್ದು, ಮಕ್ಕಳು ಶೈನಿ ಶಾರುಮತಿ ಮತ್ತು ಸಂಯುಕ್ತ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.