ಪಂಜ ಲಯನ್ಸ್ ಕ್ಲಬ್ ವತಿಯಿಂದ 21ನೇ ಉಚಿತ ಕಣ್ಣಿನ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ

0

ಲಯನ್ಸ್ ಕ್ಲಬ್ ಪಂಜ, ಪ್ರಸಾದ್ ನೇತ್ರಾಲಯಯ ಕಣ್ಣಿನ ಆಸ್ಪತ್ರೆ ಮಂಗಳೂರು, ಪುತ್ತೂರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಪಂಜ ಇವುಗಳ ಜಂಟಿ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಚಿಕಿತ್ಸಾ ಹಾಗೂ ಅರೋಗ್ಯ ತಪಾಸಣಾ ಶಿಬಿರ ಪಂಜ ಲಯನ್ಸ್ ಭವನದಲ್ಲಿ,ಆ.31 ರಂದು ನಡೆಯಿತು.ಸುಮಾರು 194 ಜನ ಶಿಬಿರಾರ್ಥಿಗಳು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದರು, ಇದರಲ್ಲಿ 21 ಜನರು ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಪಟ್ಟವರು ಇದ್ದರು. 18 ಜನರಿಗೆ ಕನ್ನಡಕ ವಿತರಿಸಲಾಯಿತು. ಕಾರ್ಯಕ್ರಮವನ್ನು ಲಯನ್ಸ್ ಪ್ರಾಂತೀಯ ಅಧ್ಯಕ್ಷರಾದ ಲ. ಪ್ರೊ ರಂಗಯ್ಯ ಶೆಟ್ಟಿಗಾರ್ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು, ಕಾರ್ಯಕ್ರಮದ ಸಂಯೋಜಕರಾದ ಲ.ಬಾಲಕೃಷ್ಣ ಕುದ್ವ ಇವರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಲ.ನಾಗೇಶ್ ಕೀನ್ನಿಕುಮೇರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಸಂಪೂರ್ಣ ಪ್ರಾಯೋಜಕತ್ವ ನೀಡಿದ ಲ.ಸೀತಾರಾಮ ಕುದ್ವ ಇವರನ್ನು ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಕ್ಲಬ್ ನ ಕೋಶಾಧಿಕಾರಿ ಲ. ವಾಸುದೇವ ಮೇಲ್ಪಾಡಿ, ನಿಕಟಪೂರ್ವಧ್ಯಕ್ಷ ಲ. ಶಶಿಧರ ಪಳಂಗಾಯ, ಉಪಸ್ಥಿತರಿದ್ದರು ಪ್ರಸಾದ್ ನೇತ್ರಾಲಯದ ತಜ್ಞ ವೈದ್ಯಧಿಕಾರಿ ಡಾ. ಶ್ರೀಶ ಮಾಹಿತಿ ನೀಡಿದರು, ಕಾರ್ಯದರ್ಶಿ ಲ. ಕರುಣಾಕರ ಎಣ್ಣೆಮಜಲು ವಂದಿಸಿದರು. ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಧಿಕಾರಿಗಳು ಆಶಾ ಕಾರ್ಯಕರ್ತೆಯರು ಮತ್ತು ಶುಶ್ರೂಕಿಯರು ಅರೋಗ್ಯ ತಪಾಸಣೆ ನೀಡಿದರು.