ಸಂಪಾಜೆಯಿಂದ ತೆಂಗಿನ ಕಾಯಿ ಹೊಡೆಯುವ ಮೂಲಕ ಚಾಲನೆ
ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು ಖಂಡಿಸಿ ಕೊಡಗು ಬಿಜೆಪಿ ವತಿಯಿಂದ “ಧರ್ಮಸ್ಥಳ ಚಲೋ ” ಬೃಹತ್ ಸಮಾವೇಶ ಬಿಜೆಪಿ ಮಾಜಿ ಶಾಸಕ ಕೆ.ಜಿ ಬೋಪಯ್ಯ ತೆಂಗಿನ ಕಾಯಿ ಹೊಡೆಯುವ ಮೂಲಕ ಸಂಪಾಜೆ ಪೆಟ್ರೋಲ್ ಪಂಪ್ ಬಳಿಯಿಂದ ಸೆ.1 ರಂದು ಚಾಲನೆ ನೀಡಲಾಯಿತು.
















ಕೊಯನಾಡು ಶ್ರೀ ಮಹಾಗಣಪತಿ ಗುಡಿಯಲ್ಲಿ ಬಿಜೆಪಿ ಕಾರ್ಯಕರ್ತರು ಒಟ್ಟುಗೂಡಿ , ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ , ಬಳಿಕ ಕೊಡಗು ಸಂಪಾಜೆ ಪೆಟ್ರೋಲ್ ಪಂಪ್ ಬಳಿ ಸೇರಿ ಮಾಜಿ ಶಾಸಕರು ಕೆ.ಜಿ ಬೋಪಯ್ಯ ತೆಂಗಿನ ಕಾಯಿ ಹೊಡೆಯುವ ಮೂಲಕ ಚಲೋಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ , ಬಿಜೆಪಿ ನಾಯಕ ಸುಬ್ರಹ್ಮಣ್ಯ ಉಪಾಧ್ಯಾಯ , ಕೊಡಗು ಜಿಲ್ಲಾ ಅಧ್ಯಕ್ಷರು ರವಿ ಕಾಳಪ್ಪ , ಮಡಿಕೇರಿ, ಚೆಂಬು, ಕೊಯನಾಡು , ಪೆರಾಜೆ ವ್ಯಾಪ್ತಿ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. ಬಳಿಕ ಕಾರು- ಬಸ್ ಮುಖಾಂತರ ಧರ್ಮಸ್ಥಳಕ್ಕೆ ತೆರಳಲಾಯಿತು.










