ಐವರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಮಟ್ಟದ ಖೋ ಖೋ ಪಂದ್ಯಾಟ

0

ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲಿ -ಜ್ಯೋತ್ಸ್ನಾ ಪಾಲೆಪ್ಪಾಡಿ

ಉತ್ತಮ ಸಂಘಟನೆಯಿಂದ ಕ್ರೀಡಾಕೂಟ ಯಶಸ್ವಿ – ಸೂಫಿ ಪೆರಾಜೆ

ಸಂಘ, ಸಂಸ್ಥೆಗಳ,ಊರಿನವರ ಸಹಕಾರ ಶ್ಲಾಘನೀಯ – ನಾಗಪ್ಪ ಪಾಲೆಪ್ಪಾಡಿ

ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ,ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಐವರ್ನಾಡು ಆಶ್ರಯದಲ್ಲಿ ತಾಲೂಕು ಮಟ್ಟದ 14 ರ ವಯೋಮಾನದ ಬಾಲಕ ಬಾಲಕಿಯರ ಖೋ ಖೋ ಪಂದ್ಯಾಟವು ಸೆ.1 ರಂದು ನಡೆಯಿತು.


ದಾನಿಗಳಾದ ಶ್ರೀಮತಿ ಜ್ಯೋತ್ಸ್ನಾ ಪಾಲೆಪ್ಪಾಡಿಯವರು ದೀಪ ಬೆಳಗಿಸಿ ಕ್ರೀಡಾಕೂಟ ಉದ್ಘಾಟಿಸಿ ಶುಭಹಾರೈಸಿದರು.
ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸೂಫಿ ಪೆರಾಜೆ ಪ್ರಾಸ್ತಾವಿಕ ಮಾತನಾಡಿದರು.


ವೇದಿಕೆಯಲ್ಲಿ ಸೋಣಂಗೇರಿ ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಅನುರಾಧ ಎ.ಆರ್, ಐವರ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ,ಸದಸ್ಯರಾದ ಯೋಗೀಶ ಕಲ್ಲಗದ್ದೆ,ಸುಂದರಲಿಂಗಂ, ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಹೊನ್ಮಪ್ಪ ಉದ್ದಂಪಾಡಿ,ಖೋ ಖೋ ಪಂದ್ಯಾಟದ ಸಂಘಟನಾ ಸಮಿತಿ ಅಧ್ಯಕ್ಷ ನಾಗಪ್ಪ ಪಾಲೆಪ್ಪಾಡಿ ,ಬೆಳ್ಳಾರೆ ಕೆ.ಪಿ.ಎಸ್.ಮುಖ್ಯಗುರು ಮಾಯಿಲಪ್ಪ ಉಪಸ್ಥಿತರಿದ್ದರು.


ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹೇಮಾವತಿ ಸ್ವಾಗತಿಸಿ,ವಿದ್ಯಾರ್ಥಿಗಳು ಪ್ರಾರ್ಥಿಸಿ,ಶಿಕ್ಷಕ ಅರವಿಂದ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕ ಭವಾನಿಶಂಕರ ವಂದಿಸಿದರು.
ಸಭಾ ಕಾರ್ಯಕ್ರಮ ನಡೆದ ಬಳಿಕ ಪಂದ್ಯಾಟದ ಅಂಗಣದಲ್ಲಿ ಶಿವರಾಮ ನೆಕ್ರೆಪ್ಪಾಡಿ ಮತ್ತು ಬಾಲಕೃಷ್ಣ ಕೀಲಾಡಿಯವರು ತೆಂಗಿನಕಾಯಿ ಒಡೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.


ತಾಲೂಕಿನ ಶಾಲೆಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.ಎರಡು ಅಂಗಣದಲ್ಲಿ ಪಂದ್ಯಾಟ ನಡೆಯಿತು.