ಚೆಂಬು: ಆನೆಹಳ್ಳ ಪ.ಜಾತಿ ಕಾಲೋನಿಗೆ ಶಾಸಕ ಎಸ್. ಪೊನ್ನಣ್ಣ ಭೇಟಿ

0

ನಾಪೋಕ್ಲು ಬ್ಲಾಕ್ ಚೆಂಬು ಗ್ರಾಮದ ಆನೆಹಳ್ಳ ಪ.ಜಾತಿ ಕಾಲೋನಿಗೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎಸ್. ಪೊನ್ನಣ್ಣ ರವರು ಭೇಟಿ ನೀಡಿದರು.
ಈ ಹಿಂದೆ ಹಲವು ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಇಲ್ಲಿನ ನಿವಾಸಿಗಳು ಶಾಸಕರಿಗೆ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಶಾಸಕರು ಕಾಲೋನಿಗೆ ಭೇಟಿ ನೀಡಿ ಎಲ್ಲರೊಂದಿಗೆ ಮಾತನಾಡುವ ಭರವಸೆ ನೀಡಿದ್ದರು. ಆಗಮಿಸಿದ ಶಾಸಕರು ಎಲ್ಲರ ಸಮಸ್ಯೆಗಳನ್ನು ಆಲಿಸಿ, ಆದ್ಯತೆ ಮೇರೆಗೆ ಮೂಲಭೂತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು.
ಸ್ಥಳದಲ್ಲೇ ಸದ್ರಿ ಕಾಲೋನಿಯ ಅಭಿವೃದ್ಧಿಗೆ ಸುಮಾರು ರೂ.೧೮ ಲಕ್ಷ ಮೊತ್ತದ ವಿವಿಧ ಕಾಮಗಾರಿಗಳಿಗೆ ಅನುದಾನ ಘೋಷಿಸಿದರು. ಅದರಲ್ಲಿ ರಸ್ತೆ ಅಭಿವೃದ್ಧಿಗೆ ರೂ ೧೦ ಲಕ್ಷ, ಅಣ್ಣಪ್ಪ ದೈವಸ್ಥಾನ ಅಭಿವೃದ್ಧಿಗೆ ರೂ ೩.೦೦ ಲಕ್ಷ, ದೋಗ್ರ ಕಟ್ಟಡ ದುರಸ್ಥಿಗೆ ರೂ ೫.೦೦ ಲಕ್ಷ ಒಳಗೊಂಡಿರುತ್ತದೆ. ಮಳೆ ನಿಂತ ಕೂಡಲೇ ಕಾಮಗಾರಿ ಪ್ರಾರಂಭಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್, ವಲಯ ಕಾಂಗ್ರೆಸ್ ಅಧ್ಯಕ್ಷರಾದ ರವಿರಾಜ್ ಹೊಸೂರು, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರಾದ ಸೂರಜ್ ಹೊಸೂರು, ಗ್ರಾಮ ಪಂಚಾಯತ್ ಸದಸ್ಯರಾದ ಆದಂ, ಬೂತ್ ಅಧ್ಯಕ್ಷರುಗಳು ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.