ಸುಳ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾದಿಗಳ ವೇದಿಕೆ ಸ್ಥಾಪನೆ –

0

ಸಮಾಲೋಚನಾ ಸಭೆಯಲ್ಲಿ
ಸಮಿತಿ ರಚನೆ- ಅಧ್ಯಕ್ಷ- ಎನ್.ಎ.ರಾಮಚಂದ್ರ, ಪ್ರಧಾನಕಾರ್ಯದರ್ಶಿ-
ಅಶೋಕ ಪ್ರಭು, ಕೋಶಾಧಿಕಾರಿ- ನಾರಾಯಣ ಕೇಕಡ್ಕ

ಸೆ. 8 ರಂದು ಸುಳ್ಯದಲ್ಲಿ ಬೃಹತ್ ಸಮಾವೇಶ ನಡೆಸಲು ನಿರ್ಧಾರ

ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಯವರ ಮೇಲಿನ ಅಪಪ್ರಚಾರ ಮತ್ತು ಅವಹೇಳನಕಾರಿ ಸಂದೇಶ ರವಾನೆಯಿಂದ ಶ್ರೀ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ಉಂಟು ಮಾಡುತ್ತಿರುವ ಷಡ್ಯಂತ್ರದ ವಿರುದ್ಧ ಸುಳ್ಯದಲ್ಲಿ ಸಮಸ್ತ ಹಿಂದೂ ಬಾಂಧವರನ್ನು ಒಟ್ಟು ಸೇರಿಸಿ ಬೃಹತ್ ಸಮಾವೇಶ ನಡೆಸುವ ಕುರಿತು ಪೂರ್ವ ಸಮಾಲೋಚನಾ ಸಭೆಯು ಸೆ. 1 ರಂದು ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಸಭೆಯಲ್ಲಿ ಸೇರಿದ ಭಕ್ತಾದಿಗಳ ಅಭಿಪ್ರಾಯದಂತೆ
“ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾದಿಗಳ ಬಳಗ” ಎಂಬ ಹೆಸರಿನ ವೇದಿಕೆ ಸ್ಥಾಪಿಸಲಾಯಿತು.
ಸುಳ್ಯ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಸೆ.8 ರಂದು ಸಮಾವೇಶವನ್ನು ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಸುವುದಾಗಿ
ನಿಗದಿಪಡಿಸಲಾಯಿತು.
ಬೆಳಗ್ಗಿನಿಂದ ಮದ್ಯಾಹ್ನ ತನಕ ಕಾರ್ಯಕ್ರಮ ನಡೆಯಲಿದ್ದು
ತಾಲೂಕಿನ ಎಲ್ಲಾ ಭಾಗದಿಂದ ಎಲ್ಲಾ ವರ್ಗದ ಸಮಾನ ಮನಸ್ಕರನ್ನು ಸೇರಿಸುವ ಕುರಿತು ಪ್ರಸ್ತಾಪಿಸಲಾಯಿತು. ಸುಮಾರು 10 ಸಾವಿರಕ್ಕೂ ಮಿಕ್ಕಿ ಕ್ಷೇತ್ರದ ಅಭಿಮಾನಿ ಬಳಗವನ್ನು ಸೇರಿಸುವ ಬಗ್ಗೆ ಅಭಿಪ್ರಾಯ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ನೂತನ ಸಮಿತಿಯಅಧ್ಯಕ್ಷರನ್ನಾಗಿ ಜನಜಾಗೃತಿ ವೇದಿಕೆಯ ಜಿಲ್ಲಾ ಸ್ಥಾಪಕಾಧ್ಯಕ್ಷ
ಎನ್. ಎ. ರಾಮಚಂದ್ರ ರವರ ಹೆಸರನ್ನು ನ್ಯಾಯವಾದಿ ಎಂ. ವೆಂಕಪ್ಪ ಗೌಡ ರವರು ಸೂಚಿಸಿ,ವಿಶ್ವನಾಥ ರೈ ಯವರು ಅನುಮೋದಿಸಿ ಎಲ್ಲರ ಅಭಿಪ್ರಾಯದಂತೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿ ಅಶೋಕ ಪ್ರಭು ಸುಳ್ಯ, ಕೋಶಾಧಿಕಾರಿ ನಾರಾಯಣ ಕೇಕಡ್ಕ ಹಾಗೂ ತಾಲೂಕಿನ ದೇವಸ್ಥಾನದ ಮೊಕ್ತೇಸರರನ್ನು,ಅಧ್ಯಕ್ಷರನ್ನುಮತ್ತು ಧಾರ್ಮಿಕ ಮುಖಂಡರನ್ನು ಸಲಹೆಗಾರರನ್ನಾಗಿ ಸಮಿತಿಗೆ ಸೇರಿಸಿಕೊಳ್ಳುವುದಾಗಿ ತೀರ್ಮಾನಿಸಲಾಯಿತು.

ವೇದಿಕೆಯಲ್ಲಿ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ವ್ಯ. ಸ. ಅಧ್ಯಕ್ಷ ಎಂ. ವೆಂಕಪ್ಪ ಗೌಡ, ಸ್ನೇಹ ಶಾಲೆಯ ಸಂಚಾಲಕ ಚಂದ್ರಶೇಖರ ದಾಮ್ಲೆ, ಉದ್ಯಮಿ ಎಂ. ಬಿ. ಸದಾಶಿವ, ಜನಜಾಗೃತಿ ವೇದಿಕೆಯ ಅಧ್ಯಕ್ಷ ಲೋಕನಾಥ್ ಅಮೆಚೂರ್, ಕಲ್ಕುಡ ದೈವಸ್ಥಾನದ ಧರ್ಮದರ್ಶಿ ಪಿ. ಕೆ ಉಮೇಶ, ಎಸ್. ಸಿಕ್ಸ್ ಅಧ್ಯಕ್ಷ ನಾರಾಯಣ ಕೇಕಡ್ಕ,
ಜನಜಾಗೃತಿ ಮಾಜಿ ಅಧ್ಯಕ್ಷ ಪಿ. ಸಿ. ಜಯರಾಮ, ವಿಶ್ವನಾಥ ರೈ ಕಳಂಜ,
ಎಸ್.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಎಸ್. ಎನ್. ಮನ್ಮಥ, ಜಿ.ಪಂ. ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಉದ್ಯಮಿ ಅಶೋಕ ಪ್ರಭು, ಸುಧಾಕರ ಕಾಮತ್, ರೋಟರಿ ಕ್ಲಬ್ ಅಧ್ಯಕ್ಷ
ಡಾ. ರಾಮ ಮೋಹನ ಭಟ್, ಒಕ್ಕೂಟದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಶಿವಪ್ರಕಾಶ್ ಅಡ್ಪಂಗಾಯ, ಶಿವಪ್ರಸಾದ್ ಮಾದನಮನೆ, ಸೋಮಶೇಖರ ಪೈಕ, ಶ್ರೀಹರಿ ಮಾಚಿಲ, ಶ್ರೀಮತಿ ಭಾರತಿ ಉಳುವಾರು, ಶ್ರೀಮತಿ ಪುಷ್ಪಾ ಮೇದಪ್ಪ ಉಪಸ್ಥಿತರಿದ್ದರು.
ಸಭೆಯಲ್ಲಿದ್ದ ಕ್ಷೇತ್ರದ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ಮಂಡಿ ಸಿದರು.

ಶ್ರೀಮತಿ ಸವಿತಾ ಸಂದೇಶ್ ಪ್ರಾರ್ಥಿಸಿದರು. ಸುರೇಶ್ ಕಣೆಮರಡ್ಕ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಬೂಡು ರಾಧಾಕೃಷ್ಣ ರೈ ಕಾರ್ಯಕ್ರಮ ನಿರೂಪಿಸಿದರು.
ತಾಲೂಕಿನ ವಿವಿಧ ಸಂಘ ಸಂಸ್ಥೆಯ ಪ್ರಮುಖರು ಹಾಗೂ ಪಧಾಧಿಕಾರಿಗಳು, ಒಕ್ಕೂಟದ ವಲಯ ಅಧ್ಯಕ್ಷರು, ಸದಸ್ಯರು ಸಭೆಯಲ್ಲಿ ಭಾಗವಹಿಸಿದರು.