ಆ.೨೨ರಂದು ನಿಧನರಾದ ಗುತ್ತಿಗಾರು ರಬ್ಬರ್ ಸೊಸೈಟಿಯ ಉಪಾಧ್ಯಕ್ಷೆ ಶ್ರೀಮತಿ ಸರೋಜಿನಿ ಗಂಗಯ್ಯ ಮುಳುಗಾಡುರವರ ಶ್ರದ್ಧಾಂಜಲಿ ಸಭೆಯು ಸೆ.೧ರಂದು ಗುತ್ತಿಗಾರಿನ ದೇವಿಸಿಟಿ ಸಂಕೀರ್ಣದ ಸಭಾಭವನದಲ್ಲಿ ನಡೆಯಿತು.
















ನ್ಯಾಯವಾದಿ ದಿನೇಶ್ ಮಡಪ್ಪಾಡಿ, ಗುತ್ತಿಗಾರು ಲಯನ್ಸ್ ಕ್ಲಬ್ ನ ವೆಂಕಪ್ಪ ಗೌಡ ಕೇನಾಜೆ, ನ್ಯಾಯವಾದಿ ರಾಮಚಂದ್ರ ರವರು ನುಡಿನಮನ ಸಲ್ಲಿಸಿದರು. ಆಗಮಿಸಿದ ಎಲ್ಲರೂ ಭಾವಚಿತ್ರಕ್ಕೆ ಪುಷ್ಪರ್ಚಾನೆಗೈದರು.
ಸರೋಜಿನಿ ಗಂಗಯ್ಯರ ಪುತ್ರ ಸನತ್ ಮುಳುಗಾಡು, ಪುತ್ರಿಯರಾದ ಡಾ| ನವ್ಯ ಉಮೇಶ್, ಶ್ರೀಮತಿ ದಿವ್ಯ ವಿಶ್ವನಾಥ ಹಾಗೂ ಮನೆಯವರು, ಕುಟುಂಬಸ್ಥರು ಮೊದಲಾದವರಿದ್ದರು.










