ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಯಶಸ್ವಿಯಾಗಿ ನಡೆದ ತಾಂಬೂಲ ಪ್ರಶ್ನಾ ಚಿಂತನೆ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತುಪೌಳಿ ಹಾಗೂ ಕಾಶಿಕಟ್ಟೆ ಗಣಪತಿ ಗುಡಿಯ ಸುತ್ತಮುತ್ತ ಅಭಿವೃದ್ಧಿಪಡಿಸುವ ಉದ್ದೇಶದಿಂದ ತಾಂಬೂಲ ಪ್ರಶ್ನೆ ಚಿಂತನೆ ಸೆ. 2ರಂದು ದೇವಳ ಆಡಳಿತ ಕಛೇರಿಯ 2ನೇ ಮಹಡಿಯಲ್ಲಿ ನೆರವೇರಿತು.

ಕೊರಂಗ್ರಪಾಡಿ ವಿದ್ವಾನ್ ಕೆ.ಪಿ. ಕುಮಾರ ಗುರು ತಂತ್ರಿ ಹಾಗೂ ಶಶಿ ಪಂಡಿತ್ ತಾಂಬೂಲ ಜೋತಿಷ್ಯ ಪ್ರಶ್ನೆಯನ್ನು ನಡೆಸಿದರು.

ಚಿಂತನೆಯಲ್ಲಿ ಸುತ್ತುಪೌಳಿ ವಿಚಾರ, ಕಾಶಿಕಟ್ಟೆ ಅಭಿವೃದ್ಧಿ ವಿಚಾರ, ದೇವಸ್ಥಾನದಲ್ಲಿರುವ ಗಣಪತಿ ದೇವರ ಅರ್ಚನೆಯ ವಿಚಾರವಾಗಿ ಮಾರ್ಗದರ್ಶನ ಮಾಡಿರುವುದಾಗಿ ತಿಳಿದು ಬಂದಿದೆ.

ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ, ಸಮಿತಿಯ ಸದಸ್ಯರಾದ ಅಶೋಕ್ ನೆಕ್ರಾಜೆ, ಡಾ. ರಘು, ಮಹೇಶ್ ಕುಮಾರ್ ಕರಿಕ್ಕಳ, ಅಜಿತ್ ಪಾಲೇರಿ, ಶ್ರೀಮತಿ ಲೀಲಾ ಮನೋಹರ್ ಶ್ರೀಮತಿ ಸೌಮ್ಯ ಭರತ್, ಶ್ರೀಮತಿ ಪ್ರವೀಣ್ ರೈ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಲೋಕೋಪಯೋಗಿ ಇಂಜಿನಿಯರ್ ಪ್ರಮೋದ್ ಮತ್ತು ಉದಯಕುಮಾರ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ರವೀಂದ್ರ ಶೆಟ್ಟಿ, ಶಿವರಾಮ ರೈ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೃಷ್ಣಮೂರ್ತಿ ಭಟ್, ಮಾಧವ ದೇವರಗದ್ದೆ ದೇವಸ್ಥಾನದ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.