ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠನ ಮಂಗಳೂರು, ವಿಜಯ ಗ್ರಾಮಾಭಿವೃದ್ಧಿ ಸಮಿತಿ ನೆಲ್ಲೂರು ಕೆಮ್ರಾಜೆ ಮತ್ತು ಮರ್ಕಂಜ, ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಹಾಗೂ ಗ್ರಾಮದ ಎಲ್ಲಾ ಮಹಿಳಾ ಸಂಘಟನೆಗಳ ಸಹಯೋಗದೊಂದಿಗೆ ಸಾರಿಗೆ ಗೊಂಡೆ ಹಾಕುವುದು, ಕಿವಿಯೋಲೆ ತಯಾರಿ, ಕೈ ಬಳೆ ತಯಾರಿಸುವ ಬಗ್ಗೆ ಉಚಿತ ತರಬೇತಿಯು ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಾಳೆ (ಸೆ. 4) ನಡೆಯಲಿದೆ.















ವಿಜಯ ಗ್ರಾಮೀಣಭಿವೃದ್ಧಿ ಪ್ರತಿಷ್ಟನಾ ಮಂಗಳೂರು ಇದರ ಸಿಇಒ ಜ್ಯೋತಿರಾಜ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಎರಡು ದಿನ ತರಬೇತಿ ನಡೆಯಲಿದ್ದು, ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಲಾಗಿದೆ.










