ಕಾನೂನು ನಿಯಮಗಳನ್ನು ಅನುಸರಿಸುವ ಬಗ್ಗೆ ಪಿಎಸ್ಐ ಸಂತೋಷ್ ರವರಿಂದ ಮಾಹಿತಿ
ಸುಳ್ಯ :ಈದ್ ಮಿಲಾದ್ ಆಚರಣೆಯ ಅಂಗವಾಗಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಸೆ 3 ರಂದು ಸಂಜೆ ಶಾಂತಿ ಸಭೆ ನಡೆಯಿತು.















ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪಿಎಸ್ಐ ಸಂತೋಷ್ ರವರು ಮಾತನಾಡಿ ಹಬ್ಬಾಚರಣೆಯ ಸಂದರ್ಭದಲ್ಲಿ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳಬೇಕು.ಅಲ್ಲದೆ ಕಾರ್ಯಕ್ರಮದಲ್ಲಿ ಡಿಜೆ ಬಳಸುವುದು ವಾಹನಗಳ ಜಾಥಾ,ಹೀಗೆ ಕಾನೂನು ವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳದಂತೆ ಮಾಹಿತಿ ನೀಡಿದರು.

ಅಂತಹ ಯಾವುದೇ ಘಟನೆಗಳು ನಡೆಯದಂತೆ ಸಂಘಟಕರು ಜಾಗೃತಿ ವಹಿಸಿಕೊಳ್ಳಬೇಕೆಂದು ಹೇಳಿದರು. ಕಾನೂನು ಉಲ್ಲಂಘನೆಯ ಯಾವುದೇ ಕಾರ್ಯಕ್ರಮಗಳು ಕಂಡುಬಂದಲ್ಲಿ ಅಂಥವರ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಕಾರ್ಯಕ್ರಮಗನ್ನು ರಾತ್ರಿ ಹತ್ತು ಗಂಟೆಯ ಮೊದಲು ಮುಗಿಸಿಕೊಳ್ಳಬೇಕೆಂದು ಸಂಘಟಕರಲ್ಲಿ ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಕೆ ಎಸ್ ಉಮ್ಮರ್, ಮಹಮ್ಮದ್ ಕುಂಞಿ ಗೂನಡ್ಕ, ಜಿ ಕೆ ಹಮೀದ್, ಎಸ್ ಕೆ ಹನಿಫಾ,ಉನೈಸ್ ಪೆರಾಜೆ,ಹಮೀದ್ ಸುಣ್ಣಮೂಲೆ,ಶರೀಫ್ ರಿಲೇಕ್ಸ್ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಸುಳ್ಯ ಪೊಲೀಸ್ ಠಾಣಾ ತನಿಖಾ ವಿಭಾಗದ ಎಸ್ಐ ಶ್ರೀಮತಿ ಸರಸ್ವತಿ ಬಿ ಟಿ ಉಪಸ್ಥಿತರಿದ್ದರು.










